ಸಾರಾಂಶ
ಅಪರಿಚಿತ ವಾಹನ ಡಿಕ್ಕಿ ಹೊಡೆದು ರಾಷ್ಟ್ರಪಕ್ಷಿ ನವಿಲು ಸಾವನ್ನಪ್ಪಿರುವ ಘಟನೆ ದಾಬಸ್‍ಪೇಟೆ- ಮಾಗಡಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ದಾಬಸ್‍ಪೇಟೆ: ಅಪರಿಚಿತ ವಾಹನ ಡಿಕ್ಕಿ ಹೊಡೆದು ರಾಷ್ಟ್ರಪಕ್ಷಿ ನವಿಲು ಸಾವನ್ನಪ್ಪಿರುವ ಘಟನೆ ದಾಬಸ್‍ಪೇಟೆ- ಮಾಗಡಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಎರಡು ವರ್ಷದ ಹೆಣ್ಣು ನವಿಲು ಇದಾಗಿದ್ದು, ರಸ್ತೆ ದಾಟುವಾಗ ಬೆಳಿಗ್ಗೆಯೇ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು, ದೇಹಕ್ಕೆ ಗಾಯವಾದ ಕಾರಣ ರಸ್ತೆಯಲ್ಲೇ ಮೃತಪಟ್ಟಿದ್ದು, ಸ್ಥಳೀಯರು ರಸ್ತೆಯಲ್ಲಿ ಮೃತಪಟ್ಟಿದ್ದ ನವಿಲು ನ್ನು ಅರಣ್ಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ಇಲಾಖೆಯ ಜಾಗದಲ್ಲೇ ಅಂತ್ಯಸಂಸ್ಕಾರ ನಡೆಸಿದ್ದಾರೆ.