ಸಾರಾಂಶ
ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಶುಕ್ರವಾರ ಕೂಡ ಮುಂದುವರೆದಿದ್ದು ಒಂದು ಗಂಟೆಗಳ ಕಾಲ ಸುರಿದಿದ್ದು ರಸ್ತೆಗಳು ಜಲಾವೃತವಾಗಿವೆ.
ಕನ್ನಡಪ್ರಭ ವಾರ್ತೆ ತುಮಕೂರುಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಶುಕ್ರವಾರ ಕೂಡ ಮುಂದುವರೆದಿದ್ದು ಒಂದು ಗಂಟೆಗಳ ಕಾಲ ಸುರಿದಿದ್ದು ರಸ್ತೆಗಳು ಜಲಾವೃತವಾಗಿವೆ.ಮಧ್ಯಾಹ್ನದವರೆಗೂ ಸುಡು ಬಿಸಿಲಿದ್ದು ಸಂಜೆ 4.30 ಕ್ಕೆ ಆರಂಭವಾದ ಮಳೆ ಭರ್ತಿ ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ಕಳೆದ ರಾತ್ರಿ ಕೂಡ ಸುಮಾರು ಎರಡು ಗಂಟೆಗಳ ಕಾಲ ಹದವಾದ ಮಳೆ ಬಿದ್ದಿದ್ದು, ನೆಲ ಒಣಗುವ ಮುನ್ನವೇ ಭರ್ಜರಿ ಮಳೆಯಾಗಿದ್ದರಿಂದ ರಸ್ತೆಗಳೆಲ್ಲಾ ಕೆರೆಯಂತಾದವು.ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ತುಮಕೂರಿನಲ್ಲಿ ಸುರಿದ ಮಳೆಗೆ ಸರ್ವೋದಯ ಪಿಯು ಕಾಲೇಜು ಮುಂಭಾಗ ರಸ್ತೆಯಲ್ಲಿ ನೀರು ತುಂಬಿ ಹರಿದಿದ್ದರಿಂದ ವಾಹನ ಸವಾರು ಸಂಚರಿಸಲು ಪರದಾಡುವಂತಾಯಿತು. ಕಳೆದ ಎರಡು ದಿವಸಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಂಪಿನ ಅನುಭವ ಉಂಟಾಗಿದೆ. ಆಟದ ಮೈದಾನಗಳು ಕೆಸರಿನ ಗದ್ದೆಗಳಾಗಿವೆ.