ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ೧೯ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಭಾನುವಾರ ಸಂಘದ ಸಮುದಾಯ ಭವನದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ಮಹಿಳಾ ಮಂಡಳಿ ಸಹಯೋಗದಲ್ಲಿ ನಡೆಯಿತು. ಬ್ರಹ್ಮಶ್ರೀ ಎಳಗೋಳಿ ರವೀಂದ್ರ ಪುರೋಹಿತ್ ಹೆಬ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಬಾಬುರಾಯ ಆಚಾರ್ಯ ಹೇರೂರು, ಕ್ರೀಡಾ ಸಾಧಕಿ ಮುಳ್ಳುಗುಡ್ಡೆ ಪ್ರತಿಕ್ಷಾ ಆಚಾರ್ಯ, ಸಾಧಕಿ ವರ್ಷಾ ಆಚಾರ್ಯ ಮುದ್ರಾಡಿ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಬಾಬುರಾಯ ಆಚಾರ್ಯ, ವಿಶ್ವಕರ್ಮರು ಸಕಲ ವಿಧ್ಯೆಯನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿ ತೋರಿಸಬೇಕು. ಕೃಷಿಕರಿಗೆ ರೈತರಿಗೆ ವಿಶ್ವಕರ್ಮ ಸಮಾಜದ ವ್ಯಕ್ತಿಯಾಗಿ ಕೃಷಿಯ ಸಾಧನೆ ಮಾಡಿ ತೋರಿಸಬೇಕು ಎಂಬುದು ನನ್ನ ಹಂಬಲ. ಅದಕ್ಕಾಗಿ ನನಗೆ ಸರ್ವರೂ ಪ್ರೋತ್ಸಾಹ ಸಹಕಾರ ನೀಡಿದ್ದು ಸಾಧನೆ ಸಾಧ್ಯವಾಗಿದೆ. ಸಂಘ ಸಂಸ್ಥೆಗಳು ನೊಂದವರು ಬಾಳಿನ ಬೆಳಕಾಗಬೇಕು ಎಂದರು.
ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ೨೦ನೇ ವರ್ಷದ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ಉಪಾಧ್ಯಕ್ಷ ಅಡಾಲಬೆಟ್ಟು ಸಂತೋಷ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕ ಹರಿಶ್ಚಂದ್ರ ಆಚಾರ್ಯ, ಹೆಬ್ರಿ ವಿಶ್ವಕರ್ಮ ಯುವ ವೃಂದದ ಗೌರವಾಧ್ಯಕ್ಷ ರಘುವೀರ ಆಚಾರ್ಯ ಗಿಲ್ಲಾಳಿ, ಗೌರವ ಸಲಹೆಗಾರ ಮಠದಬೆಟ್ಟು ಪ್ರಶಾಂತ ಆಚಾರ್ಯ, ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಗುಣ ಶಿವರಾಮ ಆಚಾರ್ಯ ಬಚ್ಚಪ್ಪು, ಯುವ ವೃಂದದ ಕಾರ್ಯದರ್ಶಿ ಅರವಿಂದ ಆಚಾರ್ಯ, ಯುವ ವೃಂದ, ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸನ್ನ ಆಚಾರ್ಯ ಮಠದಬೆಟ್ಟು ನಿರೂಪಿಸಿದರು. ಸಚಿನ್ ಆಚಾರ್ಯ ಮೇಲ್ಪೇಟೆ ಸ್ವಾಗತಿಸಿದರು.ಅರವಿಂದ ಆಚಾರ್ಯ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))