ಸಾರಾಂಶ
ಪರ್ಕಳ ಸಮೀಪದ ಕೊಡಂಗೆ ಶ್ರೀರಾಮ ಮಂದಿರದ ವಾರ್ಷಿಕ ಮಹಾಸಭೆ ಮಂದಿರದ ಸಭಾಂಗಣದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಪರ್ಕಳ ಸಮೀಪದ ಕೊಡಂಗೆ ಶ್ರೀರಾಮ ಮಂದಿರದ ವಾರ್ಷಿಕ ಮಹಾಸಭೆ ಮಂದಿರದ ಸಭಾಂಗಣದಲ್ಲಿ ಜರುಗಿತು.ಕುಕ್ಕೆಹಳ್ಳಿ ಸುದೀಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಪ್ಪಾಳೆ, ತಾಳದೊಂದಿಗೆ ಅರಿವಿಲ್ಲದೆ ತಲ್ಲೀನರಾಗಿ ಭಕ್ತಿಯಿಂದ ಮಾಡುವ ಭಜನೆಯಿಂದ ಆರೋಗ್ಯ ಸುಧಾರಣೆಯ ಜೊತೆಗೆ ದೇವರ ಸ್ಮರಣೆ ಮಾಡುವ ಸುಲಭ ಮಾರ್ಗವೂ ಆಗಿದೆ. ಮಂದಿರದಲ್ಲಿ ಮಕ್ಕಳಿಗೆ, ಯುವ ಪೀಳಿಗೆಗೆ ವಾರಕ್ಕೊಮ್ಮೆ ಭಜನಾ ತರಬೇತಿ ನೀಡುವ ಕಾರ್ಯ ನಡೆಯಬೇಕು. ಈ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಶ್ರೀರಾಮ ಮಂದಿರದ ಅಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್ ಮಾತನಾಡಿ, ಮಂದಿರದ ಅಭಿವೃದ್ಧಿ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದವರನ್ನು ಸ್ಮರಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ನಾಯಕ್ ವಾರ್ಷಿಕ ವರದಿ ಓದಿದರು. ಕೋಶಾಧಿಕಾರಿ ರಾಮದಾಸ್ ನಾಯಕ್ ಲೆಕ್ಕಪತ್ರ ಮಂಡಿಸಿದರು.ವೇದಿಕೆಯಲ್ಲಿ ಗೌರವ ಅಧ್ಯಕ್ಷ ಸರಳೇಬೆಟ್ಟು ರಮಾನಾಥ್ ನಾಯಕ್, ಶ್ರೀ ಕ್ಷೇತ್ರ ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್ ಅಲೆವೂರು ಉಪಸ್ಥಿತರಿದ್ದು, ಸೂಕ್ತ ಸಲಹೆಸೂಚನೆ ನೀಡಿದರು.
ಜೊತೆಕಾರ್ಯದರ್ಶಿ ನಳಿನಾಕ್ಷ ಕಾಮತ್ ಸ್ವಾಗತಿಸಿದರು. ದಯಾನಂದ ಪ್ರಭು ವಂದಿಸಿದರು. ಸಭೆಯಲ್ಲಿ ಶ್ರೀರಾಮ ಮಂದಿರದ ಭಕ್ತರು ಭಾಗವಹಿಸಿದ್ದರು.