ಸಾರಾಂಶ
ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.ಪ್ರಸಕ್ತ ಸಾಲಿನಲ್ಲಿ ಸಂಘ 9.16 ಲಕ್ಷ ರು. ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 8 ಲಾಭ ವಿತರಿಸುವಂತೆ ಸಭೆ ತೀರ್ಮಾನಿಸಿತು.ಸಂಘದ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ನಿರ್ದೇಶಕರಾದ ಜಲಜಾ ಶೇಖರ್, ಲೋಕೇಶ್ವರಿ ಗೋಪಾಲ್, ಕವಿತಾ ವಿರೂಪಾಕ್ಷ, ವಿದ್ಯಾ ಸೋಮೇಶ್, ವರಲಕ್ಷ್ಮಿ ಸಿದ್ಧೇಶ್ವರ್, ಚಂದ್ರಾವತಿ ಶಾಂತಪ್ಪ, ಗೀತಾ ರಾಜು, ಮಂಜುಳಾ ಅರುಣ್‌ಕುಮಾರ್, ಕೆ. ಜೀತಾಶ್ರೀ, ಎಚ್.ಬಿ. ಮೀನಾಕ್ಷಿ, ಎಚ್.ಎಂ. ರಂಜಿತ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಸ್.ಎ. ಪ್ರಥ್ವಿ ಇದ್ದರು.ಇದೇ ಸಂದರ್ಭ ಸಂಘದ ಹಿರಿಯ ಸದಸ್ಯರಾದ ಸುಮಾ ಸುದೀಪ್, ಶಾಂತಲಾ ದೇವೇಂದ್ರ ಹಾಗೂ ವಸಂತಿ ಲೀಲಾರಾಮ್ ಅವರನ್ನು ಸನ್ಮಾನಿಸಲಾಯಿತು.