ಸಾರಾಂಶ
ಕೂಗೇಕೋಡಿ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮ ದೇವಸ್ಥಾನದ ವಾರ್ಷಿಕ ಪೂಜೆ ಗ್ರಾಮಸ್ಥರ ಸಮ್ಮಖದಲ್ಲಿ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಕೂಗೇಕೋಡಿ ಗ್ರಾಮದ ಶ್ರೀಕನ್ನಂಬಾಡಿ ಅಮ್ಮ ದೇವಸ್ಥಾನದ ವಾರ್ಷಿಕ ಪೂಜೆ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಎರಡು ದಿನ ನಡೆಯಿತು. ಗ್ರಾಮದೇವತೆ ಎಂದು ಕರೆಯಲ್ಪಡುವ ಅಮ್ಮನಿಗೆ ವಿಶೇಷ ಪೂಜೆ ನಡೆದವು. ಅಮ್ಮನ ಉತ್ಸವ ಮೂರ್ತಿಗೆ ಗಂಗೆ ಪೂಜೆ ನೆರವೇರಿಸಿ, ಕಳಶ ಹೊತ್ತ ಮಹಿಳೆಯರು ಹಾಗು ವಾದ್ಯವೃಂದದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು. ಕೆಂಡ ಹಾಯುವ ಸಂಪ್ರದಾಯದಂತೆ ಪ್ರಮುಖರು ಕೆಂಡ ಹಾಯ್ದರು. ನಂತರ ಗ್ರಾಮಸ್ಥರು ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೂಗೇಕೋಡಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಪಿ.ಆದರ್ಶ್, ಕಾರ್ಯದರ್ಶಿ ಕೆ.ಡಿ.ನಿರಂಜನ್, ದೇವಾಲಯದ ಅರ್ಚಕರಾದ ರಾಜು ಕಾರ್ಯಕ್ರಮ ನಿರ್ವಹಿಸಿದರು.