ಸಾರಾಂಶ
ಅನೂಪ್ (34) ಗೃಹಬಳಕೆಯ ಸಿಲಿಂಡರಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುವ ಸಂದರ್ಭ ಬೆಂಕಿ ತಗುಲಿ ಗಂಭೀರ ಸುಟ್ಟಗಾಯಗಳಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಏ.17ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.
ಕಾರ್ಕಳ: ಹೆಬ್ರಿ ತಾಲೂಕು ಮಂಡಾಡಿಜೆಡ್ಡು ಎಂಬಲ್ಲಿ ಏ.11ರಂದು ಸಂಭವಿಸಿದ ಗ್ಯಾಸ್ ಲಿಕೇಜ್‌ನಿಂದಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಸುಟ್ಟು ಮೃತಪಟ್ಟ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮೃತ ಅನೂಪ್ ನಾಯಕ್ ಅವರ ಪತ್ನಿ ರೇಷ್ಮಾ, ತಮ್ಮ ಪತಿಯ ಸಾವಿಗೆ ಕಾರಣ ಅವರ ತಂದೆ ತಾಯಿಯೇ ಕಾರಣ ಎಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನ್ನ ಪತಿಯ ಸಾವಿಗೆ ಅವರ ತಾಯಿ ಆಶಾ ಮತ್ತು ತಂದೆ ಅನಂತ ನಾಯಕ್ ಅವರೇ ಕಾರಣ. ಅವರು ಮನೆಯಲ್ಲೇ ಅಪಾಯಕಾರಿ ರೀತಿಯಲ್ಲಿ ಅನಿಲ ಜಾಡಿಗಳನ್ನು ಬಳಸುತ್ತಿದ್ದರು. ಘಟನೆ ಸಂಭವಿಸಿದ ಸಂದರ್ಭದಲ್ಲಿ ಆಶಾ ಬೇಜವಾಬ್ದಾರಿತನದಿಂದ ಲೈಟರ್ ಉರಿಸಿದ ಪರಿಣಾಮ ಬೆಂಕಿ ತಗುಲಿ ಅನೂಪ್ ಗಂಭೀರವಾಗಿ ಗಾಯಗೊಂಡರುಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಅನೂಪ್ (34) ಗೃಹಬಳಕೆಯ ಸಿಲಿಂಡರಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುವ ಸಂದರ್ಭ ಬೆಂಕಿ ತಗುಲಿ ಗಂಭೀರ ಸುಟ್ಟಗಾಯಗಳಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಏ.17ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.
ಅನೂಪ್- ರೇಷ್ಮಾ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಪ್ರಕರಣ ಸಂಬಂಧ ಹೆಬ್ರಿ ಪೊಲೀಸರು ತನಿಖೆ ಮುಂದುವರಿಸಿದ್ದು, ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.)
;Resize=(128,128))
;Resize=(128,128))