ಕಳೆದ ಹಲವಾರು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯ ಜೊತೆಗೆ ನಿರಂತರವಾದ ಮಾರ್ಗದರ್ಶನವನ್ನು ನೀಡುತ್ತಾ ಕರಾವಳಿ ಕರ್ನಾಟಕದಲ್ಲಿ ಮನೆಮಾತಾಗಿರುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಶ್ರೀಕರ ಬಿ ಅವರು ಕರ್ನಾಟಕ ಬ್ಯಾಂಕ್ ನೇಮಕಾತಿಯ ಎಲ್ಲ ಹಂತಗಳಲ್ಲಿ ಉತ್ತೀರ್ಣರಾಗಿ ಇದೀಗ ಹೊಸಕೋಟೆಯ ಬ್ಯಾಂಕ್ ನ ಶಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪುತ್ತೂರು ತಾಲೂಕು ಬನ್ನೂರಿನ ನಿವಾಸಿಗಳಾದ ಮೀನಾಕ್ಷಿ ಬಿ ಮತ್ತು ಬಿ ಮಂಜುನಾಥಯ್ಯ ದಂಪತಿ ಪುತ್ರ ಶ್ರೀಕರರವರು ವಿವಿಧ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಇವರು ಇತ್ತೀಚೆಗೆ ಐಬಿಪಿಎಸ್‌ (IBPS) ನೇಮಕಾತಿ ಪರೀಕ್ಷೆಯಲ್ಲಿ ಕೆಲವೇ ಅಂಕಗಳಿಂದ ಅವಕಾಶ ವಂಚಿತರಾಗಿದ್ದರು. ಇದರಿಂದ ಕುಗ್ಗದೆ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಯತ್ನ ಮುಂದುವರೆಸಿದ ಶ್ರೀಕರ ಅವರು ಇದೀಗ ಕರ್ನಾಟಕ ಬ್ಯಾಂಕ್ ನೇಮಕಾತಿಯಲ್ಲಿ ಉತ್ತೀರ್ಣರಾಗುವ ಮೂಲಕ ತರಬೇತಿ ನೀಡಿದ ವಿದ್ಯಾಮಾತಾ ಅಕಾಡೆಮಿಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿ ಹೆತ್ತವರಿಗೆ ಗೌರವ ತಂದಿದ್ದಾರೆ.ನಿರಂತರ ಪರಿಶ್ರಮಕ್ಕೆ ತಕ್ಕ ಫಲ ದಕ್ಕಿಸಿಕೊಂಡ ಗ್ರಾಮೀಣ ಪ್ರತಿಭೆ

ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವ ಶ್ರೀಕರರವರು ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಮಾರ್ಗದರ್ಶನ ಪಡೆದುಕೊಂಡಿದ್ದು ಇವರ ಕಠಿಣ ಮತ್ತು ನಿರಂತರವಾದ ಪರಿಶ್ರಮ ಹಾಗೂ ಇವರ ಈ ಸಾಧನೆಯ ಬೆನ್ನೆಲುಬಾಗಿ ನಿಂತ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ‘ಒಂದೇ ಸೂರಿನಡಿಯಲ್ಲಿ ನಾವು ನೀಡುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯು ಫಲಪ್ರದವಾಗುತ್ತಿದ್ದು ಕರ್ನಾಟಕ ಬ್ಯಾಂಕ್ ಗೆ ನೇಮಕಗೊಂಡ ಶ್ರೀಕರರವರು ಇನ್ನಷ್ಟು ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆದರ್ಶವಾಗಿದ್ದು, ಪ್ರಸ್ತುತ ಪ್ರಾರಂಭವಾಗಿರುವ ನೇಮಕಾತಿ ಪರ್ವಕ್ಕೆ ತರಬೇತಿ ನೀಡಲು ನಮಗೆ ಹೊಸ ಉತ್ಸಾಹ ಬಂದಿದ್ದು ಇನ್ನಷ್ಟು ಅಭ್ಯರ್ಥಿಗಳು ನೇಮಕಗೊಳ್ಳಲಿ ಎಂಬುದೇ ನಮ್ಮ ಆಶಯ’ ಎಂದು ಸಂತಸ ವ್ಯಕ್ತಪಡಿಸಿದರು.

ಶ್ರೀಕರ ಅವರ ಈ ಸಾಧನೆಗೆ ಆಡಳಿತ ಮಂಡಳಿ, ತರಬೇತುದಾರರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.