ಸಾರಾಂಶ
ದಾಬಸ್‌ಪೇಟೆ: ನನ್ನ ಏಳು ತಿಂಗಳ ಅವಧಿಯಲ್ಲಿ ಏನು ಮಾಡುತ್ತಿದ್ದೇನೆಂಬುದು ಜನರೇ ನೋಡುತ್ತಿದ್ದಾರೆ. ಮಾಜಿ ಶಾಸಕರ ಆರೋಪಗಳಿಗೆ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದು ಶಾಸಕ ಶ್ರೀನಿವಾಸ್ ತಿರುಗೇಟು ನೀಡಿದರು.
ದಾಬಸ್‌ಪೇಟೆ: ನನ್ನ ಏಳು ತಿಂಗಳ ಅವಧಿಯಲ್ಲಿ ಏನು ಮಾಡುತ್ತಿದ್ದೇನೆಂಬುದು ಜನರೇ ನೋಡುತ್ತಿದ್ದಾರೆ. ಮಾಜಿ ಶಾಸಕರ ಆರೋಪಗಳಿಗೆ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದು ಶಾಸಕ ಶ್ರೀನಿವಾಸ್ ತಿರುಗೇಟು ನೀಡಿದರು.
ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕಾರವಿಲ್ಲವೆಂಬ ಹತಾಶೆಯಿಂದ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಟೀಕೆ ಮಾಡುತ್ತಾರೆ. 10ರಿಂದ 20 ವರ್ಷಗಳಿಂದ ಅಭಿವೃದ್ಧಿಯಾಗದ ರಸ್ತೆಗಳ ಅಭಿವೃದ್ಧಿ ಕೆಲಸಗಳಿಗೆ, ನಿಮ್ಮ ಸ್ವಾರ್ಥಕ್ಕೆ ಸ್ಥಗಿತಗೊಳಿಸಿದ್ದ ಕಾಮಗಾರಿಗಳಿಗೂ ನಾನೇ ಪೂಜೆ ಮಾಡಿ ಜೀವ ನೀಡಿದ್ದೇನೆ. ಜನ 10 ವರ್ಷ ಅವಕಾಶ ಕೊಟ್ಟಾಗ ಅಭಿವೃದ್ಧಿ ಮಾಡಲಿಲ್ಲವೇಕೆಂದು ಪ್ರಶ್ನಿಸಿದರು.ಕೊಡಿಗೇಹಳ್ಳಿ ಗ್ರಾಪಂ ಕಟ್ಟಡ ಶಿಥಿಲವಾಗಿದ್ದು ಬೀಳುವ ಹಂತದಲ್ಲಿದೆ. ಕಟ್ಟಡ ನಿರ್ಮಾಣದ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಮಾಹಿತಿ ನೀಡಿ ನನ್ನ ಅನುದಾನದಲ್ಲಿಯೂ ಹಣ ಬಿಡುಗಡೆ ಮಾಡಿಕೊಡುತ್ತೇನೆ. ವೈಯಕ್ತಿಕವಾಗಿಯೂ ಸಹಾಯ ಮಾಡುತ್ತೇನೆ ಎಂದರು.
ಕೊಡಿಗೇಹಳ್ಳಿ, ಗುಟ್ಟೆಪಾಳ್ಯ, ಕರಿಮಾರನಹಳ್ಳಿ ಕಾಂಕ್ರೀಟ್ ರಸ್ತೆ ಕಾಮಗಾರಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್,ಕೊ ಡಿಗೇಹಳ್ಳಿ ಗ್ರಾಪಂ ಅಧ್ಯಕ್ಷ ಅಂಜಿನಮೂರ್ತಿ, ತಾಪಂ ಮಾಜಿ ಸದಸ್ಯೆ ಅನಿತ ತ್ಯಾಗರಾಜು, ಮುಖಂಡರಾದ ವಕೀಲ ಹನುಮಂತೇಗೌಡ, ಚನ್ನಕೃಷ್ಣ, ಹಸಿರುವಳ್ಳಿ ಕುಮಾರ್, ಅನಿ, ಬಾಬು, ಗೋಪಿ, ಪ್ರದೀಪ್, ಪಿಡಿಒ ಸಾವಿತ್ರಮ್ಮ, ಮತ್ತಿತರರಿದ್ದರು.