ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಅಂತರಸಂತೆ ಗ್ರಾಮವು ಗಡಿಭಾಗವಾಗಿದ್ದು, ಈ ಭಾಗದಲ್ಲಿ ಆಸ್ಪತ್ರೆ, ಪೊಲೀಸ್ ಠಾಣೆ, ಶಾಲೆ, ಕೆಇಬಿ ಇಲಾಖೆ ಕಟ್ಟಡಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ತಾಲೂಕಿನ ಅಂತರಸಂತೆ ಗ್ರಾಮದಲ್ಲಿ ಜೈ ಭೀಮ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ, ಪುನೀತ್ ರಾಜ್ ಕುಮಾರ್ ಹಾಗೂ ಅಂಬಾರಿ ಆನೆ ಅರ್ಜುನನ ಸವಿನೆನಪು, ಸಂವಿಧಾನ ಅರ್ಪಣಾ ದಿನ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರಸಂತೆ ಆಟೋ ಚಾಲಕರ ಸಂಘ ಬಹಳ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಇದು ಗಡಿ ಭಾಗವಾದ್ದರಿಂದ ನೆರೆ ಕೇರಳ ರಾಜ್ಯದ ಪ್ರಭಾವ ಹೆಚ್ಚಿದೆ. ಆದ್ದರಿಂದ ಕನ್ನಡ ಉಳಿವಿಗಾಗಿ ಈ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಆಗಬೇಕು.ಕನ್ನಡಕ್ಕಾಗಿ ಶ್ರಮಿಸಿದವರು ಸದಾ ನೆನೆಯುವವರು ಆಟೋ ಚಾಲಕರು ಎಂಬುದಕ್ಕೆ ಅಂದಿನ ಶಂಕರ್ ನಾಗ್ ಅವರಿಂದ ಹಿಡಿದು ಪುನೀತ್ ರಾಜ್‌ಕುಮಾರ್ ಅವರವರೆಗೂ ಸ್ಮರಿಸುತ್ತಿರುವುದು ಸಾಕ್ಷಿಯಾಗಿದೆ. ಕನ್ನಡ, ಕನ್ನಡ ಹಬ್ಬದ ಆಚರಣೆ ಎಂದು ಬಂದಾಗ ಮೊದಲ ಸಾಲಿನಲ್ಲಿ ನಿಲ್ಲುವವರೇ ಆಟೋ ಚಾಲಕರು ಎಂದರು.
ಅಂತರಸಂತೆಯ ತಾರಕ ವೃತ್ತದಿಂದ ಕನ್ನಡಾಂಬೆಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಗ್ರಾಪಂ ಅಧ್ಯಕ್ಷೆ ರೇಖಾ ಗುರುಸ್ವಾಮಿ, ಉಪಾಧ್ಯಕ್ಷೆ ರೂಪ ಸುಬ್ರಹ್ಮಣ್ಯ, ಜೈ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸತೀಶ್ ಗೌಡ, ನಂಜನಗೂಡಿನ ಕೆಪಿಸಿಸಿ ಸಂಯೋಜಕ ಸೋಮೇಶ್, ಕಾಂಗ್ರೆಸ್ ಮುಖಂಡ ಪ್ರದೀಪ್, ಯುವ ಮುಖಂಡ ನವೀನ್ ದಾಸ್, ವರ್ತಕರ ಸಂಘದ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷ ಪ್ರದೀಪ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಬಾಲಯ್ಯ, ರಘುರಾಮ್, ಗ್ರಾಪಂ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಕಲೀಂಪಾಷ, ಸದಸ್ಯರಾದ ಮಾರುತಿ, ಪ್ರದೀಪ್, ಲೋಲಮ್ಮ ಕಾಂತನಾಯಕ, ಕವಿತಾ ಜಯಣ್ಣ, ಸೋಮೇಶ್, ನಸ್ರೀನ್ ತಾಜ್, ಅಪ್ಸರ್ ಖಾನ್, ಪುಟ್ಟಮಲ್ಲಿ ಸುರೇಶ್, ಜೈ ಭೀಮ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್, ಗೌರವಾಧ್ಯಕ್ಷ ಪ್ರಕಾಶ್ ಬುದ್ಧ, ಉಪಾಧ್ಯಕ್ಷ ಆನಂದ್, ಕಾರ್ಯದರ್ಶಿ ಜವರಾಜು, ಸದಸ್ಯರಾದ ಬಾಲಕೃಷ್ಣ, ರಂಗಸ್ವಾಮಿ, ಕೆ. ಸುರೇಶ್, ಮಹದೇವಸ್ವಾಮಿ, ನಂಜುಂಡಸ್ವಾಮಿ, ನಂಜಪ್ಪ, ಸಣ್ಣಮುದ್ದಯ್ಯ, ಎಸ್. ಕುಮಾರ್, ಮಂಜು, ನಾಗರಾಜು, ನಾಗೇಂದ್ರ, ಮಹೇಶ್, ರಾಜೇಶ್, ಸ್ವಾಮಿ, ಮೋಹನ್, ಅಜಯ್ ಇದ್ದರು.