ಕಾಂಗ್ರೆಸ್‌ ವಿರೋಧಿ ಅಲೆಯಿಂದ ಬಿಜೆಪಿಗೆ ಜಯ ಸಲೀಸು: ಬಿ.ವೈ.ರಾಘವೇಂದ್ರ

| Published : Apr 26 2024, 12:51 AM IST / Updated: Apr 26 2024, 12:58 PM IST

ಕಾಂಗ್ರೆಸ್‌ ವಿರೋಧಿ ಅಲೆಯಿಂದ ಬಿಜೆಪಿಗೆ ಜಯ ಸಲೀಸು: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಗ್ಯಾರಂಟಿಗಳು ರಾಜ್ಯದ ಎಲ್ಲಾ ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ರಾಜ್ಯದ ಪ್ರಜ್ಞಾವಂತ ಮತದಾರರು ಇದನ್ನು ಗಮನಿಸುತ್ತಿದ್ದಾರೆ. ಬಿಜೆಪಿಗೆ ಹೆಚ್ಚಿನ ಬೆಂಬಲವನ್ನು ನೀಡಲಿದ್ದಾರೆ ಎಂದು ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

 ಶಿವಮೊಗ್ಗ :  ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದ್ದು, ಇದರ ಪರಿಣಾಮವಾಗಿ ಬಿಜೆಪಿ ಸುಲಭವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಬಿಜೆಪಿ ನಗರ ಮಂಡಲ ವತಿಯಿಂದ ನಗರದ ಮತಬೇಟೆಗೆ ನಗರದ ವಿವಿಧೆಡೆ ಮಿಂಚಿನ ಸಂಚಾರ ನಡೆಸಿದರು. ಸೋಮಿನಕೊಪ್ಪ ರಸ್ತೆಯ ಶಾರದಮ್ಮ ಬಡಾವಣೆ ಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿಗಳು ರಾಜ್ಯದ ಎಲ್ಲಾ ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ಇದು ಮೂಗಿಗೆ ತುಪ್ಪ ಸವರುವಂತಹ ಕೆಲಸವಾಗಿದೆ. ರಾಜ್ಯದ ಪ್ರಜ್ಞಾವಂತ ಮತದಾರರು ಇದನ್ನು ಗಮನಿಸುತ್ತಿದ್ದಾರೆ. 

ಬಿಜೆಪಿಗೆ ಹೆಚ್ಚಿನ ಬೆಂಬಲವನ್ನು ನೀಡಲಿದ್ದಾರೆ ಎಂದು ಹೇಳಿದರು.ಈ ಚುನಾವಣೆ ರಾಷ್ಟ್ರೀಯ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಯುತ್ತಿರುವ ಚುನಾವಣೆಯಾಗಿದೆ. ಯಾವುದೇ ಕುಟುಂಬದ ವಿಷಯ, ವ್ಯಕ್ತಿಗಳ ವಿಷಯ, ಟೀಕೆ ಟಿಪ್ಪಣಿಗಳಿಗೆ ಮತದಾರರು ತಲೆ ಕೆಡಿಸಿಕೊಳ್ಳುವುದಿಲ್ಲ, ರಾಷ್ಟ್ರದ ರಕ್ಷಣೆ ಹಾಗೂ ಪ್ರತಿಯೊಬ್ಬ ಪ್ರಜೆಯ ರಕ್ಷಣೆ ಮಾಡುವಂತಹ ಸರ್ಕಾರವನ್ನು ಆಯ್ಕೆ ಮಾಡಬೇ ಕೆಂಬುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಈ ಬಗ್ಗೆ ಯಾವುದೇ ಸಂಶಯವಿಲ್ಲ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿ.ವೈ.ರಾಘವೇಂದ್ರ ಅವರು ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದರು.ಮಾಜಿ ಕಾರ್ಪೋರೇಟರ್‌ಗಳಾದ ಆಶಾಚಂದ್ರಪ್ಪ, ಬೊಮ್ಮನಕಟ್ಟೆ ಮಾಲತೇಶ್, ನಗರ ಬಿಜೆಪಿ ಅಧ್ಯಕ್ಷ ಮೋಹನ್‌ರೆಡ್ಡಿ, ಪ್ರಮುಖರಾದ ನಾಗರಾಜ್, ಸೋಮಶೇಖರ್ ಮತ್ತಿರರರು ಉಪಸ್ಥಿತರಿದ್ದರು.

ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ, ಮತಯಾಚನೆಶಿವಮೊಗ್ಗ: ವಕೀಲರ ಸ್ಪಂದನೆಯಿಂದ ನನ್ನ ಗೆಲುವಿನ ವಿಶ್ವಾಸ ಇನ್ನೂ ಹೆಚ್ಚಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ನಗರದ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ವಕೀಲರ ಮತಯಾಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದ ವಿಚಾರಗಳು ಬಂದಾಗ ವಕೀಲರು ತಮ್ಮದೇ ಆದ ರೀತಿಯಲ್ಲಿ ಶಕ್ತಿ ಮೀರಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ವಕೀಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅನೇಕ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಅದೆಲ್ಲವನ್ನು ಉತ್ತಮ ರೀತಿಯಲ್ಲಿ ಪರಿಗಣಿಸಲಾಗುವುದು. ಶಿವಮೊಗ್ಗ ನಗರವನ್ನು ಮಾದರಿ ನಗರವನ್ನಾಗಿಸಲು ಹಾಗೂ ಉತ್ತಮ ನ್ಯಾಯಾಲಯ ಕ್ಯಾಂಪಸ್‌ನ್ನು ನಿರ್ಮಿಸುವ ಬಗ್ಗೆಯೂ ಸಹ ವಕೀಲರಿಂದ ಸೂಚನೆ ಬಂದಿದೆ ಎಂದರು.

ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನಿರ್ಮಾಣ ಮಾಡಿದಂತಹ 60 ವಸತಿ ಗೃಹಗಳನ್ನು ನ್ಯಾಯಾಧೀಶರ ಕೊರಿಕೆಯ ಮೇರೆಗೆ ನ್ಯಾಯಾಂಗ ಇಲಾಖೆಗೆ ಯಥಾವತ್ತಾಗಿ ಬಿಟ್ಟು ಕೊಟ್ಟ ಘಟನೆಯನ್ನು ಸಂಸದರು ಈ ವಕೀಲರ ಸ್ಪಂದನೆಯಿಂದ ಗೆಲುವಿನ ವಿಶ್ವಾಸ ಹೆಚ್ಚಿದೆ ಸಂದರ್ಭದಲ್ಲಿ ಸ್ಮರಿಸಿದರು.

ಮೊದಲ ಹಂತದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿದೆ ಇದಕ್ಕೆ ಬಿಸಿಲಿನ ತಾಪಮಾನವೂ ಕಾರಣವಾಗಿರಬಹುದು. ಪ್ರಧಾನಿ ನರೇಂದ್ರ ಮೋದಿಯವರು ವಾರದಲ್ಲಿ 7 ದಿನವೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಪುಣ್ಯಾತ್ಮನ ಕಾರ್ಯ ವೈಖರಿಗಾಗಿ ಮತದಾರರು ತಮ್ಮ ಒಂದು ಮತವನ್ನು ನೀಡುವ ಮೂಲಕ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು. ಹಿರಿಯ ವಕೀಲರಾದ ಬಸಪ್ಪ ಗೌಡ ಸೇರಿದಂತೆ ಅನೇಕ ವಕೀಲರು ಹಾಗೂ ಸಂಘದ ಪದಾಧಿಕಾರಿ ಉಪಸ್ಥಿತರಿದ್ದರು.