ಬಜೆಟ್‌ನಲ್ಲಿ ಜನ ವಿರೋದಿ ಸುಳ್ಳಿನ ಕಂತೆ: ನಮೋಶಿ

| Published : Feb 17 2024, 01:19 AM IST

ಸಾರಾಂಶ

ಲೋಕಸಭಾ ಚುನಾವಣೆ ಬಜೆಟ್ ಆಗಿದೆ, ಇದೊಂದು ಸುಳ್ಳಿನ ಕಂತೆ. ಕೇಂದ್ರ ಸರ್ಕಾರವನ್ನು ದೋಷಣೆ ಮಾಡುವಲ್ಲಿಯೇ ಕಾಲಹರಣ ಮಾಡುತ್ತ ಪ್ರಧಾನಿಗಳನ್ನು ಟೀಕಿಸುವ ಬಜೆಟ್‌ ಇದಾಗಿದೆ ಎಂದು ಬಿಜೆಪಿ ಎಂಎಲ್‌ಸಿ ಶಶಿಲ್‌ ನಮೋಶಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಿಂದ ರಾಜ್ಯ ಸರ್ಕಾರ ಸಂಪೂರ್ಣವಾಗಿ ಆರ್ಥಿಕವಾಗಿ ದಿವಾಳಿಯಾಗಿರುವುದು ಸ್ಪಷ್ಟ, ಇವರು ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಸರ್ಕಸ್ ಮಾಡಿತ್ತಿದ್ದಾರೆ. ಲೋಕಸಭಾ ಚುನಾವಣೆ ಬಜೆಟ್ ಆಗಿದೆ, ಇದೊಂದು ಸುಳ್ಳಿನ ಕಂತೆ. ಕೇಂದ್ರ ಸರ್ಕಾರವನ್ನು ದೋಷಣೆ ಮಾಡುವಲ್ಲಿಯೇ ಕಾಲಹರಣ ಮಾಡುತ್ತ ಪ್ರಧಾನಿಗಳನ್ನು ಟೀಕಿಸುವ ಬಜೆಟ್‌ ಇದಾಗಿದೆ ಎಂದು ಬಿಜೆಪಿ ಎಂಎಲ್‌ಸಿ ಶಶಿಲ್‌ ನಮೋಶಿ ಹೇಳಿದ್ದಾರೆ.

ಹೇಳಿಕೆ ನೀಡಿರುವ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಕೆವಲ ರು. 44 ಸಾವಿರ ಕೋಟಿ ಹಣ ಇಟ್ಟಿರುವುದನ್ನು ನೋಡಿದರೆ ಇದು ಯಾವ ಅಭಿವೃದ್ಧಿಗೂ ಸಾಲುವುದಿಲ್ಲ. ಅಧಿಕಾರಕ್ಕೆ ಬರುವ ಮುಂಚೆ ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೂ ಅನುದಾನಿತ ನೌಕಕರಿಗೂ ನೂತನ ಪಿಂಚಣಿ ಯೋಜನೆ ರದ್ದಗೊಳಿಸಿ ಹಳೆಯ ಪಿಂಚಣಿ ಯೋಜನೆ ಮಾಡುತ್ತವೆ ಎಂದು ಆದರೆ ಕೆವಲ ಪ್ರಣಾಳಿಕೆಗೆ ಮಾತ್ರ ಸೀಮಿತವಾಗಿದೆ. ನೌಕರರ ಆಶೆಗೆ ಬಜೆಟ್‌ ತಣ್ಣೀರು ಎರಚಿದೆ ಎಂದಿದ್ದಾರೆ.

ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಸರ್ಕಾರಿ ನೌಕಕರ ಗಮನದಲ್ಲಿ ಇಟ್ಟು ಕೊಂಡು 7ನೇ ವೇತನ ಆಯೋಗ ರಚನೆ ಮಾಡಿತ್ತು, ಈ ಸರ್ಕಾರ ಬಂದ ನಂತರ 7ನೇ ವೇತನ ಆಯೋಗದ ವರದಿಯನ್ನು ಗ್ಯಾರಂಟಿ ಯೋಜನೆ ಹಣಕಾಸು ಹೊಂದಿಸಲು ಮುಂದೂಡುತ್ತಾ ಬಂತು ಈಗ ಬಜೆಟನಲ್ಲಿ ಅವರ ನಿರೀಕ್ಷೆಗಳನ್ನು ಹುಸಿಗೊಳಿಸಿ ರಾಜ್ಯ ಸರ್ಕಾರಿ ನೌಕಕರ ಬೆನ್ನಿಗೆ ಚೂರಿ ಹಾಕಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರೀಕ್ಷೆಗಳು ಹುಸಿಯಾಗಿವೆ ಎಂದೂ ನಮೋಶಿ ಟೀಕಿಸಿದ್ದಾರೆ.