ಸಾರಾಂಶ
ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಪಟ್ಟಣದ ಚೆಸ್ಕಾಂ ಕಚೇರಿ ಮುಂದೆ ಜಮಾಯಿಸಿದ್ದ ರೈತ ಸಂಘದ ಪದಾಧಿಕಾರಿಗಳು ಧಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಮಾತನಾಡಿ, ದೇಶದಲ್ಲಿ ಕೃಷಿ ಪಂಪ್ ಸೆಟ್‌ಗಳನ್ನು ಅಳವಡಿಸಿಕೊಂಡು ವ್ಯವಸಾಯ ಮಾಡುತ್ತಿರುವ ರೈತರ ಬದುಕು ಬೀದಿಗೆ ಬಿದ್ದಿರುವ ಸಂದರ್ಭದಲ್ಲಿ, ತಮ್ಮ ಇಲಾಖೆ ಪೋಸ್ಟ್ ಪೇಡ್ ಹಾಗೂ ಪ್ರಿಪೈಡ್ ವ್ಯವಸ್ಥೆಯ ಸ್ಮಾರ್ಟ್ ಮೀಟರುಗಳನ್ನು ಅಳವಡಿಸುವುದು ಸರಿಯಲ್ಲ ಎಂದು ಖಂಡಿಸಿದರು.ಸರ್ಕಾರ ಸ್ವಾಮಿನಾಥನ್ ವರದಿ ಜಾರಿ ಮಾಡಿ ರೈತ ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಬೆಳೆಗಳನ್ನು ಖರೀದಿ ಮಾಡಿ ರೈತರ ಬದುಕನ್ನು ಹಸನು ಮಾಡುವ ತನಕ ಈ ರೀತಿಯ ಯೋಜನೆಗಳನ್ನು ಜಾರಿ ಮಾಡಬೇಡಿ, ರೈತರನ್ನು ದಿಕ್ಕರಿಸಿ ಮೀಟರ್ ಅಳವಡಿಸಲು ಬಂದರೆ ಬಾರಿ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಹಾಗೂ ಅಳವಡಿಸುವ ಮೀಟರ್‌ಗಳನ್ನು ಕಿತ್ತು ವಾಪಾಸ್ ಇಲಾಖೆಗೆ ಒಪ್ಪಿಸುವ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಚೆಸ್ಕಾಂ ಇಇ ತಬಸ್ಸುಮ್ ನಿಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರ ಗಮನಕ್ಕೆ ತರುವ ಮೂಲಕ ಬಗರಹರಿಸಲಾಗುವುದು ಎಂದು ಭರವಸೆ ನೀಡಿದರು.ತಾಲೂಕು ಉಪಾಧ್ಯಕ್ಷ ಚಾರ್ಲಿ, ಪ್ರದಾನ ಕಾರ್ಯದರ್ಶಿ ಪೆರಿಯಾನಾಯಗಂ, ಸಂಘಟನಾ ಕಾರ್ಯದರ್ಶಿ ಚಾಲಿರ್ಸ್, ಯುವ ಘಟಕದ ಸಂಚಾಲಕ ವಾಸು, ಕುಮಾರ್, ಪದಾಧಿಕಾರಿಗಳು ಚಂದ್ರು, ವಸಂತ, ಪೊನ್ನುಸ್ವಾಮಿ, ಅಪ್ಪುಸ್ವಾಮಿ, ಅಂಥೋಣಿಸ್ವಾಮಿ, ನೀಲಮ್ಮ, ಶಶಿಕಲಾ, ಸಗಯಾ ಮೇರಿ, ಅಂಥೋಣಿಯಮ್ಮ, ಕುಠಿ, ಮಣಿ, ಸಗಾಯರಾಜ್, ರಾಜು ಹಾಗೂ ಇತರರು ಇದ್ದರು.