ಅನುಶಿಕ ಬೋಜಮ್ಮ ರಾಜ್ಯ ಮಟ್ಟಕ್ಕೆ ಆಯ್ಕೆ

| Published : Nov 04 2025, 12:45 AM IST

ಸಾರಾಂಶ

ಮೂರ್ನಾಡು ಮಾರುತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಶಿಕ ಬೋಜಮ್ಮ ಬಿ ಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ಮಾರುತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ. ಯು. ಸಿ ವಿದ್ಯಾರ್ಥಿನಿ ಅನುಶಿಕ ಬೋಜಮ್ಮ ಬಿ. ಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ, ಕಾಪ್ಸ್ ಪದವಿಪೂರ್ವ ಕಾಲೇಜು ಗೋಣಿಕೊಪ್ಪ ಇದರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪ ಮತ್ತು ಪೊನ್ನಂಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅನುಶಿಕ ಬೋಜಮ್ಮ ಬಿ. ಸಿ. ಎತ್ತರ ಜಿಗಿತ (High jump) ನಲ್ಲಿ ಪ್ರಥಮ ಸ್ಥಾನ ಮತ್ತು ಜಾವಲಿನ್ ಎಸೆತದಲ್ಲಿ (Javelin Throw) ದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ವಿದ್ಯಾ ಸಂಸ್ಥೆ ಗೆ ಕೀರ್ತಿ ತಂದಿದ್ದಾಳೆ. ಅನುಶಿಕ ಬೋಜಮ್ಮ ಮೂರ್ನಾಡಿನ ಬಡುವಂಡ ಚಂಗಪ್ಪ ಸುಶೀಲ ಚಂಗಪ್ಪ ದಂಪತಿಯ ಪುತ್ರಿ.

----------------------------------------------------

ಸೋಮವಾರಪೇಟೆ ತಾಲೂಕು ಕಸಾಪ ಸಭೆ: ಐಗೂರಿನಲ್ಲಿ ತಾಲೂಕು ಸಮ್ಮೇಳನಕ್ಕೆ ನಿರ್ಣಯ

ಕನ್ನಡಪ್ರಭವಾರ್ತೆ ಸೋಮವಾರಪೇಟೆಕನ್ನಡ ಸಾಹಿತ್ಯ ಪರಿಷತ್ ಕಸಬ ಹೋಬಳಿ ಘಟಕದ ಸಭೆ ಪಟ್ಟಣದ ಸಾಹಿತ್ಯ ಭವನದಲ್ಲಿ ಅಧ್ಯಕ್ಷ ನಂಗಾರು ಕೀರ್ತಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಐಗೂರು ಗ್ರಾಮದಲ್ಲಿ ಸೋಮವಾರಪೇಟೆ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಮುಂದಿನ ದಿನಗಳಲ್ಲಿ ನಡೆಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಈ ಹಿಂದೆ ಗೌಡಳ್ಳಿಯಲ್ಲಿ ಅರ್ಥಪೂರ್ಣವಾಗಿ ತಾಲೂಕು ಸಮ್ಮೇಳನವನ್ನು ಆಚರಿಸಲಾಯಿತು. ಕನ್ನಡ ಭಾಷಾಭಿಮಾನಿಗಳು ಹಾಗು ದಾನಿಗಳು ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಿದ್ದು, ಆ ಮಾದರಿಯಲ್ಲೇ ಐಗೂರಿನಲ್ಲೂ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಅಧ್ಯಕ್ಷರು ಹೇಳಿದರು.

ಸಭೆಯಲ್ಲಿ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ.ನಾಗರಾಜ್, ಶಾಂತಳ್ಳಿ ಘಟಕದ ಅಧ್ಯಕ್ಷ ಸಿ.ಎಸ್. ನಾಗರಾಜ್ ಮಾತನಾಡಿದರು. ತಾಲೂಕು ಸಮಿತಿ ಸದಸ್ಯ ಎಂ.ಪಿ.ಧರ್ಮಪ್ಪ, ಕಸಬಾ ಹೋಬಳಿ ಘಟಕದ ಕಾರ್ಯದರ್ಶಿ ವಿಶ್ವರಾಜೇಅರಸ್, ಕೋಶಾಧಿಕಾರಿ ಎಸ್.ಎಂ.ಬೆಳ್ಯಪ್ಪ ಪದಾಧಿಕಾರಿಗಳಾದ ಮಚ್ಚಂಡ ಅಶೋಕ್, ತಿಮ್ಮಯ್ಯ ಇದ್ದರು.