ಮಾಹೆಯ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ಗೆ ಎಪಿಎಚ್ಇಎ ಮಾನ್ಯತೆ

| Published : Dec 02 2024, 01:17 AM IST

ಮಾಹೆಯ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ಗೆ ಎಪಿಎಚ್ಇಎ ಮಾನ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಲ್ಜಿಯಂನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಎಪಿಎಚ್‌ಇಎ ಸೆಪ್ಟೆಂಬರ್‌ 5ರಿಂದ ಜಾರಿಗೆ ಬರುವಂತೆ, ಪಿಎಸ್‌ಪಿಎಚ್‌ನ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸಿ ಮುಂದಿನ 5 ವರ್ಷಗಳಿಗೆ ಈ ಮಾನ್ಯತೆಯನ್ನು ನೀಡಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಾಹೆ ಮಣಿಪಾಲ್‌ ಇದರ ಅಂಗಸಂಸ್ಥೆ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ (ಪಿಎಸ್‌ಪಿಎಚ್‌) ಗೆ ಏಜೆನ್ಸಿ ಫಾರ್ ಪಬ್ಲಿಕ್ ಹೆಲ್ತ್ ಎಜುಕೇಶನ್ ಅಕ್ರೆಡಿಟೇಶನ್ (ಎಪಿಎಚ್‌ಇಎ) ನಿಂದ ಮಾನ್ಯತೆ ದೊರಕಿದೆ. ಈ ಮಾನ್ಯತೆ ಪಡೆದ ಏಷ್ಯಾದ ಏಕೈಕ ಮತ್ತು ವಿಶ್ವದ 11ನೇ ಸಾರ್ವಜನಿಕ ಆರೋಗ್ಯ (ಪಬ್ಲಿಕ್ ಹೆಲ್ತ್) ಸಂಸ್ಥೆಯಾಗಿದೆ. ಬೆಲ್ಜಿಯಂನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಎಪಿಎಚ್‌ಇಎ ಸೆಪ್ಟೆಂಬರ್‌ 5ರಿಂದ ಜಾರಿಗೆ ಬರುವಂತೆ, ಪಿಎಸ್‌ಪಿಎಚ್‌ನ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸಿ ಮುಂದಿನ 5 ವರ್ಷಗಳಿಗೆ ಈ ಮಾನ್ಯತೆಯನ್ನು ನೀಡಿದೆ.

ಈ ಮಾನ್ಯತೆಯೊಂದಿಗೆ ಪಿಎಸ್‌ಪಿಎಚ್‌ ಇಂಗ್ಲೆಂಡ್‌ನ ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಮತ್ತು ಅಮೆರಿಕದ ರಿಚರ್ಡ್ ಎಂ ಫೇರ್‌ಬ್ಯಾಂಕ್ಸ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಇತ್ಯಾದಿ ವಿಶ್ವಶ್ರೇಷ್ಠ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಲ್ಪಡುತ್ತಿದೆ.

ಈ ಬಗ್ಗೆ ಮಾಹೆಯ ಉಪಕುಲಪತಿ ಲೆಜ (ಡಾ.) ಎಂ.ಡಿ. ವೆಂಕಟೇಶ್ ಅವರು ಪಿಎಸ್‌ಪಿಎಚ್‌ನ ಪಯಣದಲ್ಲಿ ಇದು ಒಂದು ಮಹತ್ತರ ಮೈಲಿಗಲ್ಲು. ಈ ಮಾನ್ಯತೆಯು ವಿಶ್ವದರ್ಜೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ತರಬೇತಿ ನೀಡುತ್ತಿರುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮಾಹೆಯ ಸಹಉಪ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ರಾವ್, ಪಿಎಸ್‌ಪಿಎಚ್‌ನ ನಿರ್ದೇಶಕ ಡಾ. ಚೆರಿಯನ್ ವರ್ಗೀಸ್ ಅವರು ಸಂಸ್ಥೆಯ ಈ ಬೆಳವಣಿಗೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.