ಸಾರಾಂಶ
ಭೋವಿ ಸಮುದಾಯದ ನಿಗಮದ ಸೌಲಭ್ಯಗಳ ವಿತರಣೆಯಲ್ಲಿ ನಿಗಮದ ಅಧ್ಯಕ್ಷರ ಪಾತ್ರವಿಲ್ಲ, ಆದರೂ ಸಹ ಭೋವಿ ಸಮುದಾಯ ನಿಗಮದ ಅಧ್ಯಕ್ಷರನ್ನು ನಿಂದಿಸುವ ಕೆಲಸ ಯಾಕೆ? ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಅದನ್ನು ಬಿಟ್ಟು ನಿಗಮದ ಅಧ್ಯಕ್ಷರ ಮೇಲೆ ಅವಹೇಳನ ಪದ ಬಳಕೆ ಎಷ್ಟರ ಮಟ್ಟಿಗೆ ಸರಿ? ಎಂದು ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಕೋಲಾರ
ಭೋವಿ ಸಮುದಾಯದ ನಿಗಮದ ಅಧ್ಯಕ್ಷ ರವಿಕುಮಾರ್‌ರನ್ನು ನಿಂದಿಸಿರುವ ಶಾಸಕ ಕೊತ್ತೂರು ಮಂಜುನಾಥ್ ಕ್ರಮ ಖಂಡನೀಯ ಎಂದು ಭೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಜಿ. ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಕೊತ್ತೂರು ಮಂಜುನಾಥರ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಮುಂದೆ ಬಾಯಿಗೆ ಬಂದಂತೆ ಭೋವಿ ಸಮುದಾಯ ನಿಗಮದ ಅಧ್ಯಕ್ಷರಿಗೆ ಅವಹೇಳನವಾಗಿ ಮಾತನಾಡಿರುವುದು ಸಮುದಾಯಕ್ಕೆ ಘಾಸಿ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಕೂಡಲೇ ಶಾಸಕ ಕೊತ್ತೂರು ಮಂಜುನಾಥ್ ಸಾರ್ವಜನಿಕವಾಗಿ ಭೋವಿ ಸಮುದಾಯಕ್ಕೆ ಕ್ಷಮಾಪಣೆ ಕೋರಬೇಕು ಎಂದು ಒತ್ತಾಯಿಸಿದರು. ಕ್ಷಮೆಯಾಚಿಸದಿದ್ದರೆ ಭೋವಿ ಯುವ ವೇದಿಕೆಯಿಂದ ಜಿಲ್ಲೆ ಮತ್ತು ರಾಜ್ಯಾದ್ಯಂತ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ನಡೆಯ ಬಗ್ಗೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಭೋವಿ ಸಮುದಾಯದ ನಿಗಮದ ಸೌಲಭ್ಯಗಳ ವಿತರಣೆಯಲ್ಲಿ ನಿಗಮದ ಅಧ್ಯಕ್ಷರ ಪಾತ್ರವಿಲ್ಲ, ಆದರೂ ಸಹ ಭೋವಿ ಸಮುದಾಯ ನಿಗಮದ ಅಧ್ಯಕ್ಷರನ್ನು ನಿಂದಿಸುವ ಕೆಲಸ ಯಾಕೆ? ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಅದನ್ನು ಬಿಟ್ಟು ನಿಗಮದ ಅಧ್ಯಕ್ಷರ ಮೇಲೆ ಅವಹೇಳನ ಪದ ಬಳಕೆ ಎಷ್ಟರ ಮಟ್ಟಿಗೆ ಸರಿ? ಎಂದು ಕಿಡಿಕಾರಿದರು.ಭೋವಿ ಯುವ ವೇದಿಕೆ ಮುಖಂಡರಾದ ಶ್ರೀನಾಥ್, ಕಾಶಿನಾಥ್, ಶಿವಕುಮಾರ್, ವೆಂಕಟೇಶ್, ಸುನಿಲ್ ಇದ್ದರು.