ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ: ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ನಿಜಕ್ಕೂ ಸನಾತನ ಧರ್ಮೀಯರ ದೇವಲೋಕದ ಅಪೂರ್ವ ಸಂಗಮ ಎಂದು ಪಟ್ಟಣದ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮಿಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ: ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ನಿಜಕ್ಕೂ ಸನಾತನ ಧರ್ಮೀಯರ ದೇವಲೋಕದ ಅಪೂರ್ವ ಸಂಗಮ ಎಂದು ಪಟ್ಟಣದ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮಿಗಳು ಹೇಳಿದರು.
ಶ್ರೀಗಳು ಕೊಲ್ಹಾರಕ್ಕೆ ಆಗಮಿಸಿದ ವೇಳೆ ಪ್ರಯಾಗರಾಜದಲ್ಲಿನ ಅನುಭವ ಹಂಚಿಕೊಂಡರು. ಭಾರತ ಹುಣ್ಣಿಮೆಯ ದಿನ ಬೆಳಗಿನ ಜಾವ 3.42 ನಿಮಿಷಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಅಮ್ರತ ಸ್ನಾನ ಮಾಡಿ ತ್ರೀವೇಣಿ ಸಂಗಮ ಆರತಿ ಪೂಜಾ ಸಲ್ಲಿಸಲಾಗಿದೆ. ವಿಶ್ವ ಶಾಂತಿಯಿಂದ ನೆಲಿಸಿ, ನಾಡ ಸಮ್ರದ್ದಿಯಾಗಲೆಂದು ಗಂಗಾ ಮಾತೆ, ಯಮುನಾ ಮಾತೆ, ಸರಸ್ವತಿ ಮಾತೆಯರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ ಈ ವರ್ಷದ ಮಾಘ ಮಾಸದಲ್ಲಿ ನಡೆಯುತ್ತಿರುವದು ಮಹತ್ವಪೂರ್ಣಣದ್ದಾಗಿದೆ. ಸನಾತನ ಧರ್ಮೀಯರು ಜ.13ರಿಂದ ಫೆ.26ರವರೆಗೆ ಮಾಡುವ ಪುಣ್ಯ ಸ್ನಾನ ಪವಿತ್ರಮಯವಾದುದು. ಮಹಾಕುಂಭ ಮೇಳದಲ್ಲಿ ಭಾಗವಹಿಸಿಲು ಸಾಧ್ಯವಾಗದವರು ಹೋಗಿ ಬಂದಿರುವವರಿಂದ ತೀರ್ಥ ಪ್ರಸಾದ ಪಡೆದು ಭಕ್ತಿ ಭಾವದಿಂದ ಸ್ವೀಕರಿಸಿದರೆ ಅಮೃತ ಸ್ನಾನ ಮಾಡಿದ ಭಾಗ್ಯ ಲಭಿಸುವುದು. ಈ ಸಲದ ಮಹಾಕುಂಭ ಮೇಳ ಮಾನವ ಜನ್ಮದ ಸಾರ್ಥಕತೆಗೆ ಸನ್ಮಾರ್ಗ, ಸರ್ವ ಜನಾಂಗದ ಸಮಾನತೆ, ಸರ್ವರಲ್ಲಿ ದೈವಿ ಭಾವ ಕಾಣುವದೆ ತ್ರೀವೇಣಿ ಸಂಗಮ ಸ್ನಾನದ ಪ್ರಾಮುಖ್ಯತೆ ಪಡೆಯಿತು ಎಂದರು.
ಪುಣ್ಯ ಕ್ಷೇತ್ರ ಪ್ರಯಾಗರಾಜ ತ್ರಿವೇಣಿ ಸಂಗಮ. ಈ ಸಲದ ಮಹಾಕುಂಭ ಮೇಳದ ಸ್ನಾನ ಮಾಡಿದವರ ಜನ್ಮ ಪಾವನ, ಸರ್ವರ ಕಂಟಕ, ಪಾಪ ಕರ್ಮ ದೂರಾಗಿ ಆಯುರಾರೋಗ್ಯ ಸಕಲ ಸಂಪತ್ತು ಅಭಿವೃದ್ಧಿಯಾಗಿ ಇಷ್ಟಾರ್ಥ ಸಿದ್ದಿಸುವದು ಸತ್ಯ ಎಂದು ವೇದಗಳಲ್ಲಿ ಯುಕ್ತವಾಗಿದೆ ಎಂದು ಹೇಳಿದರು.ಶ್ರೀಗಳೊಂದಿಗೆ ಕೋಲ್ಹಾರ ಪಟ್ಟಣದ ದುಂಡಪ್ಪ ಮಂಟೂರ, ಹಣಮಂತ ಗಿಡ್ಡಪಗೋಳ, ಸಂಕಪ್ಪ ಗಿಢ್ಡಪ್ಪಗೋಳ, ರಾಚಪ್ಪ ಹೆಬ್ಬಾಳ ಅನೇಕ ಭಕ್ತರು ತೆರಳಿದ್ದರು.