ಶಂಕರರಾವ ದೇಶಮುಖಗೆ ಅಪ್ಪಾ ಶಕ್ತಿಶ್ರೀ ಪ್ರಶಸ್ತಿ

| Published : Oct 17 2024, 12:46 AM IST / Updated: Oct 17 2024, 12:47 AM IST

ಸಾರಾಂಶ

ನಾಲತವಾಡ: ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಶಕ್ತಿ ಪೀಠದಲ್ಲಿ ಶ್ರೀಮಠದ ಪೀಠಾಧಿಪತಿ ಡಾ.ಅಪ್ಪಾರಾವ್ ದೇವಿ ಮುತ್ತ್ಯಾ ಮಹಾರಾಜರ ಸಾನ್ನಿಧ್ಯದಲ್ಲಿ ಮೈಸೂರು ದರ್ಬಾರ್ ಮಾದರಿಯಲ್ಲಿ ದಸರಾ ದರ್ಬಾರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ನಾಲತವಾಡ ಪಟ್ಟಣದ ನವದೆಹಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಂಕರರಾವ ದೇಶಮುಖ ಅವರು ಕಳೆದ ವರ್ಷ ಬರಗಾಲದಲ್ಲಿ ಕೂಡ ಭರಪೂರ ತೊಗರಿ ಬೆಳೆದ ಕಾರಣ ಕೃಷಿ ಕ್ಷೇತ್ರದ ಅಪ್ಪಾ ಶಕ್ತಿಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ನಾಲತವಾಡ: ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಶಕ್ತಿ ಪೀಠದಲ್ಲಿ ಶ್ರೀಮಠದ ಪೀಠಾಧಿಪತಿ ಡಾ.ಅಪ್ಪಾರಾವ್ ದೇವಿ ಮುತ್ತ್ಯಾ ಮಹಾರಾಜರ ಸಾನ್ನಿಧ್ಯದಲ್ಲಿ ಮೈಸೂರು ದರ್ಬಾರ್ ಮಾದರಿಯಲ್ಲಿ ದಸರಾ ದರ್ಬಾರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ನಾಲತವಾಡ ಪಟ್ಟಣದ ನವದೆಹಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಂಕರರಾವ ದೇಶಮುಖ ಅವರು ಕಳೆದ ವರ್ಷ ಬರಗಾಲದಲ್ಲಿ ಕೂಡ ಭರಪೂರ ತೊಗರಿ ಬೆಳೆದ ಕಾರಣ ಕೃಷಿ ಕ್ಷೇತ್ರದ ಅಪ್ಪಾ ಶಕ್ತಿಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮಡು, ಮಠದ ಪೀಠಾಧಿಪತಿ ಡಾ.ಅಪ್ಪಾರಾವ್ ದೇವಿ ಮುತ್ಯಾ ಹಾಗೂ ಇನ್ನಿತರರು ಇದ್ದರು.