ಕನ್ನಡಪ್ರಭ ವಾರ್ತೆ ಹುಕ್ಕೇರಿ ನಿಧನಾನಂತರವೂ ಸ್ಮರಿಸುವ ಬೆರಳೆಣಿಕೆಯಷ್ಟು ಮಹನೀಯರಲ್ಲಿ ಲಿಂಗೈಕ್ಯ ಅಪ್ಪಣಗೌಡ ಪಾಟೀಲರ ಹೆಸರು ಮುಂಚೂಣಿಯಲ್ಲಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ನಿಧನಾನಂತರವೂ ಸ್ಮರಿಸುವ ಬೆರಳೆಣಿಕೆಯಷ್ಟು ಮಹನೀಯರಲ್ಲಿ ಲಿಂಗೈಕ್ಯ ಅಪ್ಪಣಗೌಡ ಪಾಟೀಲರ ಹೆಸರು ಮುಂಚೂಣಿಯಲ್ಲಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸಹಕಾರ ಮಹರ್ಷಿ ದಿ.ಅಪ್ಪಣ್ಣಗೌಡಾ ಪಾಟೀಲ ಅವರ 52ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಸಹಕಾರಿ ತತ್ವದಡಿ ಗ್ರಾಹಕರಿಗೆ ವಿದ್ಯುತ್ ಸರಬರಾಜು ಸಂಘ ಸ್ಥಾಪಿಸಿದ ಅವರಿಂದ ಇಂದು ತಾಲೂಕಿನ ಜನರ ಮನೆ ಮನೆಗಳಲ್ಲಿ ಬೆಳಕು ಕಾಣುವಂತಾಗಿದೆ ಎಂದರು.ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ಸಹಕಾರ ವಲಯದಲ್ಲಿ ಸ್ಥಾಪಿತವಾದ ಸಂಘದ ಕಾರ್ಯ ವಿಶಿಷ್ಟವಾಗಿದೆ. ಸಂಘದ ಸಂಸ್ಥಾಪಕ ದಿ.ಅಪ್ಪಣಗೌಡರು ಸಮಾಜದ, ಶೈಕ್ಷಣಿಕ ಪ್ರಗತಿಗಾಗಿ ಬಡವರ ಉದ್ಧಾರಕ್ಕಾಗಿ ತಮ್ಮ ಬದುಕನ್ನು ಸವೆಸಿದವರು. ಅದಕ್ಕಾಗಿ ಅವರ ನಿಧನದ ನಂತರವೂ ಜನರ ಸ್ಮರಣೆಯಲ್ಲಿದ್ದಾರೆ ಎಂದು ಸ್ಮರಿಸಿದರು.
ನಿರ್ದೇಶಕರಾದ ಸತ್ತೆಪ್ಪಾ ನಾಯಿಕ, ಕೆಂಪಣ್ಣಾ ದೇಸಾಯಿ ಮಾತನಾಡಿದರು. ಸಂಸ್ಥೆಯ ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪೂರೆ, ಅಭಿಯಂತರರಾದ ಉದಯ ಮಗದುಮ್ಮ, ಮಂಜುನಾಥ ಕುದನೂರಿ, ಡಿ.ಎಸ್.ಘಸ್ತಿ, ವಿ.ಎಸ್.ಚಂದಪ್ಪಗೋಳ, ಬಿ.ಎಂ.ಮಗದುಮ್ಮ, ಪಿ.ಎ.ಪಾಟೀಲ, ಎಂ.ಎಸ್.ಹೆಬ್ಬಾಳೆ, ಎನ್.ಎಂ.ಮಗದುಮ್ಮ, ಎಂ.ಎಂ.ಕರಾಡೆ, ಒ.ಎಂ.ಹಿರೇಕೋಡಿ, ವಿನಾಯಕ ರಾಮದುರ್ಗಿ, ಬಸವರಾಜ ವಾಜಂತ್ರಿ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಅಪ್ಪಣ್ಣಗೌಡರ ಪುತ್ಥಳಿಗೆ ಪೂಜೆ ಸಲ್ಲಿಸಿ ಅವರನ್ನು ಸ್ಮರಿಸಿದರು.