ಕನ್ನಡಪ್ರಭ ವಾರ್ತೆ ಸಂಕೇಶ್ವರ ಸಹಕಾರಿ ಕ್ಷೇತ್ರದ ಮೂಲಕ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಶ್ರಮಿಸಿದ ಸಹಕಾರ ಮಹರ್ಷಿ ಅಪ್ಪಣಗೌಡ ಪಾಟೀಲರ ದೂರದೃಷ್ಟಿಯ ಫಲ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಸ್ತಿತ್ವವನ್ನು ಕಾಪಾಡಿ, ರೈತರು ಮತ್ತು ಕಾರ್ಮಿಕರ ಹಿತ ಸಂರಕ್ಷಿಸಲು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಡಾ.ಶಿವಲಿಂಗೇಶ್ವರ ಮಹಾಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಸಹಕಾರಿ ಕ್ಷೇತ್ರದ ಮೂಲಕ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಶ್ರಮಿಸಿದ ಸಹಕಾರ ಮಹರ್ಷಿ ಅಪ್ಪಣಗೌಡ ಪಾಟೀಲರ ದೂರದೃಷ್ಟಿಯ ಫಲ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಸ್ತಿತ್ವವನ್ನು ಕಾಪಾಡಿ, ರೈತರು ಮತ್ತು ಕಾರ್ಮಿಕರ ಹಿತ ಸಂರಕ್ಷಿಸಲು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಡಾ.ಶಿವಲಿಂಗೇಶ್ವರ ಮಹಾಸ್ವಾಮೀಜಿ ಕರೆ ನೀಡಿದರು.ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ವಾತಂತ್ರ್ಯ ಸೇನಾನಿ ಅಪ್ಪಣಗೌಡ ಪಾಟೀಲರ 52ನೇ ಪುಣ್ಯಸ್ಮರಣೆ ಹಾಗೂ ಕಾರ್ಖಾನೆಯ 67ನೇ ಕಬ್ಬು ನುರಿಸುವ ಹಂಗಾಮಿನ ಆರಂಭದ ಬಾಯ್ಲರ್ ಪ್ರದೀಪನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಸ ಹಂಗಾಮು ಕಬ್ಬು ಬೆಳೆಗಾರರಿಗೆ ಉತ್ತಮ ಇಳುವರಿ, ಯೋಗ್ಯ ಆದಾಯ ಹಾಗೂ ಸಮೃದ್ಧಿ ತಂದುಕೊಡಲಿ. ಕಾರಖಾನೆ ಸದೃಢವಾಗಿ ಬೆಳೆದು ರೈತರು, ಕಾರ್ಮಿಕರು ಮತ್ತು ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಹಾರೈಸಿದರು.ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಮಾತನಾಡಿ, ಸಂಸ್ಥಾಪಕ ಅಪ್ಪಣಗೌಡ ಪಾಟೀಲರ ತತ್ವಾದರ್ಶಗಳು ಆಡಳಿತ ಮಂಡಳಿಗೆ ಇಂದಿಗೂ ಮಾರ್ಗದರ್ಶಕವಾಗಿವೆ. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸುವ ಕಾರ್ಯ ಆರಂಭಿಸಲಾಗಿದೆ. ಕಾರ್ಮಿಕರಿಗೆ ಶೇ.8.33ರಷ್ಟು ಬೋನಸ್ ನೀಡಲು ನಿರ್ಧರಿಸಲಾಗಿದೆ ಎಂದರು.ರೈತ ಮುಖಂಡ ಬಸವರಾಜ ಪಾಟೀಲ ಮಾತನಾಡಿ, ಅಪ್ಪಣಗೌಡ ಪಾಟೀಲರ ದೂರದೃಷ್ಟಿ ಮತ್ತು ಪರಿಶ್ರಮದಿಂದ ಸ್ಥಾಪನೆಯಾದ ಕಾರ್ಖಾನೆ ಈ ಭಾಗದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಕಾರ್ಖಾನೆಯನ್ನು ಬೆಳೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಖಾನೆಯ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಬಸಪ್ಪ ಮರಡಿ, ಸುರೇಂದ್ರ ದೊಡ್ಡಲಿಂಗನವರ, ವ್ಯವಸ್ಥಾಪಕ ನಿರ್ದೇಶಕ ಮಹಾದೇವಸ್ವಾಮಿ.ಡಿ.ಎಸ್, ಶಂಕರರಾವ ಹೆಗಡೆ, ಜಯಪ್ರಕಾಶ ಕರಜಗಿ, ರವಿ ಹಿಡಕಲ್, ಭೀಮಗೌಡ ಗಿರಿಗೌಡನವರ, ಗುರು ಪಾಟೀಲ, ಸಿದ್ರಾಮ ಮುಗಳಿ, ಈರಗೌಡ ಪಾಟೀಲ, ಗುರುಸಿದ್ದ ಮಗದುಮ್ಮ, ಕಲ್ಲಪ್ಪ ಮರಡಿ, ಅನ್ನಪ್ಪ ಹಿಟ್ಟಣಗಿ, ಕಾರ್ಖಾನೆ ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

ನಿರ್ದೇಶಕ ಬಾಬಾಸಾಹೇಬ ಅರಬೋಳೆ ಸ್ವಾಗತಿಸಿದರು. ಕಚೇರಿ ಅಧೀಕ್ಷಕ ಸುಭಾಷ ನಾಶಿಪುಡಿ ನಿರೂಪಿಸಿ, ವಂದಿಸಿದರು