ಸಾರಾಂಶ
ಮೂಡಲಗಿ ಪಟ್ಟಣದ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘಕ್ಕೆ ನಿವೇಶನ ನೀಡಲು ಆಗ್ರಹಿಸಿ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘಕ್ಕೆ ನಿವೇಶನ ನೀಡಲು ಆಗ್ರಹಿಸಿ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ಪಟ್ಟಣದ ಲಕ್ಷ್ಮೀ ನಗರದಲ್ಲಿ ಬಣಜಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಟಿಎಂಸಿ ನಂ.1837 ಖಾಲಿ ಪ್ಲಾಟ್‌ನ್ನು ಬಣಜಿಗ ಸಮಾಜದ ವಿವಿಧ ಕಾರ್ಯಕ್ರಮ ನಡೆಸಲು ಮತ್ತು ಸಾಂಸ್ಕೃತಿಕ ಭವನ ನಿರ್ಮಿಸಿಕೊಳ್ಳಲು ನಿವೇಶನ ನೀಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಶಿವಪ್ಪ ಬುಜನ್ನವರ, ಸಂಗಪ್ಪ ಅಂಗಡಿ, ವಿ.ಸಿ.ಗಾಡವಿ, ಗಂಗಪ್ಪ ಪುಠಾಣಿ, ವಿ.ಎಸ್.ಸಬರದ, ಅನ್ವರ ನದಾಫ, ಹುಸೇನ ಶೆಖ್ಖ, ರಮೇಶ ಸಣ್ಣಕ್ಕಿ, ಎಲ್.ಸಿ.ಗಾಡವಿ ಮತ್ತಿತರರು ಉಪಸ್ಥಿತರಿದ್ದರು.