ಸಾರಾಂಶ
ಮಾರುಕಟ್ಟೆಗೆ ಬರುವ ರೈತರು ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿಗಳಿಲ್ಲ. ಶೀಘ್ರವೇ ಬೇಡಿಕೆಗಳನ್ನು ಈಡೇರಿಸಿ ಬರುವ ರೈತರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯ
ಮುಂಡರಗಿ: ಮುಂಡರಗಿ ಪಟ್ಟಣದ ಗದಗ ರಸ್ತೆಯಲ್ಲಿರುವ ಹೊಸ ಎಪಿಎಂಸಿ ಮಾರುಕಟ್ಟೆಯಲ್ಲಿ ಶಾಶ್ವತ ಕುಡಿವ ನೀರು ಹಾಗೂ ಬೀದಿ ದೀಪಗಳು ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ವತಿಯಿಂದ ಎಪಿಎಂಸಿ ಕಚೇರಿ ಎದುರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ ಮಾತನಾಡಿ, ಇಲ್ಲಿನ ಎಪಿಎಂಸಿಗೆ ನಿತ್ಯ ನೂರಾರು ಜನ ರೈತರು ಬಂದು ಹೋಗುತ್ತಿದ್ದು, ಸರಿಯಾದ ಕುಡಿವ ನೀರಿನ ವ್ಯವಸ್ಥೆ ಇಲ್ಲ, ರೈತರು ತಮ್ಮ ಉತ್ಪನ್ನಗಳನ್ನು ತಂದಾಗ ರಾತ್ರಿ ಇಲ್ಲಿಯೇ ಮಲಗಬೇಕಾಗುತ್ತದೆ. ಆದರೆ ರೈತರಿಗೆ ಸರಿಯಾದ ಬೆಳಕಿನ ವ್ಯವಸ್ಥೆ ಇರುವುದಿಲ್ಲ ಹಾಗೂ ಮಾರುಕಟ್ಟೆಗೆ ಬರುವ ರೈತರು ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿಗಳಿಲ್ಲ. ಶೀಘ್ರವೇ ಬೇಡಿಕೆಗಳನ್ನು ಈಡೇರಿಸಿ ಬರುವ ರೈತರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.ಚಂದ್ರಕಾಂತ ಉಳ್ಳಾಗಡ್ಡಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಇಲ್ಲಿ ಆಡಳಿತ ಮಂಡಳಿ ಇಲ್ಲ, ಹೀಗಾಗಿ ಅಧಿಕಾರಿಗಳು ರೈತರ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಈ ಕೂಡಲೇ ರೈತರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಉಪ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಈರಣ್ಣ ಗಡಾದ, ಯಮನಪ್ಪ ಭಜಂತ್ರಿ, ಹುಚ್ಚಪ್ಪ ಹಂದ್ರಾಳ, ಪ್ರಕಾಶ ದಳವಾಯಿ, ಅಂದಪ್ಪ ಕುರಿ, ಎಸ್.ಎ. ಹಳ್ಳಿಕೇರಿ, ರಾಘವೇಂದ್ರ ಕುರಿ, ಅಣ್ಣಪ್ಪ ಡಂಬಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.