ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ಮನವಿ

| Published : Apr 14 2025, 01:24 AM IST

ಸಾರಾಂಶ

ಭುವನಹಳ್ಳಿ ವೆಂಕಣ್ಣನಕೆರೆ ಗಿಡಗಂಟೆಗಳನ್ನು ಕೀಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾವಿನಹಳ್ಳಿ ಗ್ರಾಮದಿಂದ ಭುವನಹಳ್ಳಿಗೆ ಹೂವಿನಹಳ್ಳಿ ಎಚ್. ಎಂ. ಮಲ್ಲೇಗೌಡರು ಸುಮಾರು 45 ವರ್ಷಗಳ ಹಿಂದೆ ಈ ರಸ್ತೆ ಮಾಡಿಸಿದ್ದರು. ಈಗ ಬಾಗೂರು ನುಗ್ಗೇಹಳ್ಳಿ ಹೋಬಳಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಜನಪ್ರತಿನಿಧಿಗಳು ಈ ರಸ್ತೆ ಮಾಡಿಸುವುದರಿಂದ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ವೆಂಕಣ್ಣನ ಕೆರೆಕೋಡಿ ನೀರು ಹರಿಯಲು ಸೇತುವೆ ಆಗಬೇಕು ಎಂದು ತಿಳಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಭುವನಹಳ್ಳಿ ಗ್ರಾಮದ ವೆಂಕಣ್ಣನ ಕೆರೆ ಏರಿ ಮಾರ್ಗದಿಂದ ಒಂಟಿ ಮಾವಿನಹಳ್ಳಿ ಗೇಟಿಗೆ ಡಾಂಬರ್ ರಸ್ತೆ ನಿರ್ಮಾಣ ಮಾಡುವುದರಿಂದ ತಗಡೂರು ಗ್ರಾಮ ಪಂಚಾಯಿತಿ ಹಾಗೂ ಬಾಗೂರು ಹೋಬಳಿಯ ರೈತರು ನುಗ್ಗೇಹಳ್ಳಿ ಹೋಬಳಿ ಕೇಂದ್ರ ತಲುಪಲು ಅನುಕೂಲವಾಗುತ್ತದೆ. ಶಾಸಕರು ಈ ರಸ್ತೆ ನಿರ್ಮಾಣಕ್ಕೆ ಗಮನಹರಿಸಬೇಕು ಎಂದು ಭುವನಹಳ್ಳಿ ನಿವೃತ್ತ ಎಂಜಿನಿಯರ್ ಎಲ್. ಕೆ. ಶಿವಾನಂದ್ ಮನವಿ ಮಾಡಿದರು.

ಹೋಬಳಿಯ ಭುವನಹಳ್ಳಿ ವೆಂಕಣ್ಣನಕೆರೆ ಗಿಡಗಂಟೆಗಳನ್ನು ಕೀಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾವಿನಹಳ್ಳಿ ಗ್ರಾಮದಿಂದ ಭುವನಹಳ್ಳಿಗೆ ಹೂವಿನಹಳ್ಳಿ ಎಚ್. ಎಂ. ಮಲ್ಲೇಗೌಡರು ಸುಮಾರು 45 ವರ್ಷಗಳ ಹಿಂದೆ ಈ ರಸ್ತೆ ಮಾಡಿಸಿದ್ದರು. ಈಗ ಬಾಗೂರು ನುಗ್ಗೇಹಳ್ಳಿ ಹೋಬಳಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಜನಪ್ರತಿನಿಧಿಗಳು ಈ ರಸ್ತೆ ಮಾಡಿಸುವುದರಿಂದ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ವೆಂಕಣ್ಣನ ಕೆರೆಕೋಡಿ ನೀರು ಹರಿಯಲು ಸೇತುವೆ ಆಗಬೇಕು ಎಂದು ತಿಳಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.