ಅಂಗವಿಕಲರ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‌ನಲ್ಲಿ ಅಂಗವಿಕಲರ ನಿಗಮ ಮಂಡಳಿಯನ್ನು ಸ್ಥಾಪಿಸಿ, ಅದಕ್ಕೆ ಅಂಗವಿಕಲರಲ್ಲಿಯೇ ಒಬ್ಬರನ್ನು ಅಧ್ಯಕ್ಷರನ್ನು ನೇಮಿಸುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಕೆ.ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಅಂಗವಿಕಲರ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‌ನಲ್ಲಿ ಅಂಗವಿಕಲರ ನಿಗಮ ಮಂಡಳಿಯನ್ನು ಸ್ಥಾಪಿಸಿ, ಅದಕ್ಕೆ ಅಂಗವಿಕಲರಲ್ಲಿಯೇ ಒಬ್ಬರನ್ನು ಅಧ್ಯಕ್ಷರನ್ನು ನೇಮಿಸುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಕೆ.ಷಡಕ್ಷರಿ ತಿಳಿಸಿದರು.

ನಗರಸಭೆ ಆವರಣದಲ್ಲಿ ತಾಪಂ, ತಾಲ್ಲೂಕು ಆಡಳಿತ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಅಂಗವಿಕಲ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹುಟ್ಟುವಾಗ ಯಾರೂ ಸಹ ಅಥವಾ ಹುಟ್ಟಿದ ನಂತರವೂ ಅಂಗವಿಕಲತೆಯನ್ನು ಬಯಸುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಿಂದ ಅಂಗವಿಕಲತೆಯನ್ನು ಹೊಂದಬೇಕಾಗುತ್ತದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಇತರರೊಂದಿಗೆ ಸಮಾನವಾಗಿ, ಸ್ವಾವಲಂಬಿಯಾಗಿ ಹಾಗೂ ಸ್ವಾಭಿಮಾನದಿಂದ ಬದುಕುವ ಹಕ್ಕನ್ನು ಇವರು ಹೊಂದಿದ್ದಾರೆ ಎಂದು ಹೇಳಿದರು.ಸರ್ಕಾರಗಳು ಸಾಕಷ್ಟು ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಿದ್ದೇವೆ. ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳು ಸಭೆಯನ್ನು ಕರೆಯುತ್ತಾರೆ. ಆ ಸಮಯದಲ್ಲಿ ಮುಖ್ಯಮಂತ್ರಿಗಳ ಮನವೋಲಿಸಿ ವೈಯುಕ್ತಿಕವಾಗಿ ಮಾಡಿಸುತ್ತೇನೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇಂತಹವರು ಲಕ್ಷಾಂತರ ಜನರಿದ್ದು ಮೂಲಭೂತ ಸೌಕರ್ಯಗಳು ಸರಿಯಾಗಿ ದೊರೆಯುತ್ತಿಲ್ಲವಾದ್ದರಿಂದ ನಿಗಮ ಮಂಡಳಿ ಸ್ಥಾಪನೆಯಾದರೆ ಅವರಿಗೆ ಸವಲತ್ತುಗಳು ದೊರೆಯುತ್ತವೆ ಎಂದರು.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಅನುದಾನವನ್ನು ಸಮರ್ಪಕವಾಗಿ ಬಳಸುವಂತೆ ಅಂಗವಿಕಲರಿಗೂ ತನ್ನದೇ ಆದ ನಿಗಮ ಮಂಡಳಿಯನ್ನು ಸ್ಥಾಪಿಸುವ ಚಿಂತನೆ ಸರ್ಕಾರದ ಮುಂದಿಟ್ಟು ಜಾರಿಗೊಳ್ಳುವಂತೆ ಶ್ರಮಿಸುತ್ತೇನೆ, ಅಂಗವಿಕಲರ ಕುಂದುಕೊರತೆಗಳಿಗೆ ಸ್ಪಂದಿಸಿ, ಅವರ ಶ್ರೇಯೋಭಿವೃದ್ಧಿಗೆ ನಿಗಮ ಮಂಡಳಿಯ ಮೂಲಕ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ. ಸರ್ಕಾರದ ನೀತಿ ನಿರ್ಣಯಗಳಲ್ಲಿ ಅಂಗವಿಕಲರ ಧ್ವನಿಗೆ ಆದ್ಯತೆ ದೊರಕಿಸುವುದು ಅತ್ಯಾವಶ್ಯಕ ಎಂದರು.ತುಮಕೂರು ಜಿಲ್ಲಾ ಅಂಗವಿಕಲ ಹಿತಾರಕ್ಷಣಾ ಸಮಿತಿಯ ಅಧ್ಯಕ್ಷ ಗಂಗರಾಜು ಮಾತನಾಡಿ, ಜಿಲ್ಲೆಯಲ್ಲಿ 60-70 ಸಾವಿರ ಜನ ಅಂಗವಿಕಲರಿದ್ದು ನಮಗೆ ನಿಗಮ ಮಂಡಳಿಯ ಅವಶ್ಯಕತೆಯಿದೆ, ಮಹಿಳೆಯರಿಗೆ ಬಸ್‌ನಲ್ಲಿ ಪ್ರಯಾಣ ಉಚಿತವಾಗಿರುವಂತೆ ನಮಗೂ ಸಹ ಪಾಸ್‌ಗೆ ಬದಲಾಗಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಬೇಕಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಹಣವನ್ನು ಸರಿಯಾಗಿ ಸದ್ಬಳಕೆ ಆಗದೆ ಹೋದರೆ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ನಮ್ಮ ಹಣದ ಸದ್ಬಳಕೆಯಾಗುವಂತೆ ಮಾಡಬೇಕು ಎಂದರು.ಪ್ರಾಂಶುಪಾಲ ರಾಮಕೃಷ್ಣಯ್ಯ ಮಾತನಾಡಿ ಅಂಕವಿಕಲರಿಗೆ ಯಾವುದೇ ಅನ್ಯಾಯಗಳು ಆಗಬಾರದೆಂದು ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ಬಂದಿದೆ ಅವುಗಳ ಉಪಯೋಗವನ್ನು ನಾವುಗಳು ಪಡೆದುಕೊಳ್ಳಬೇಕು. ಅಂಕವಿಕಲತೆ ಶಾಪ, ಪೂರ್ವಜನ್ಮದ ಕರ್ಮ, ಅವರಿಗೆ ಭಿಕ್ಷಾಟನೆಯೇ ಒಂದು ಮಾರ್ಗ ಎಂಬ ಕಾಲವಿತ್ತು ಆದರೆ ಇಂದು ಬದಲಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧಕರು ಸಾಧನೆಗಳನ್ನು ಮಾಡಿದ್ದಾರೆ. ನಮ್ಮದು ತಪ್ಪಿಲ್ಲದ ಆಕಸ್ಮಿಕವಾಗಿ ಆಗಿರುವ ಘಟನೆಗಳು. ವಿಕಲತೆ ಯಾವತ್ತು ಸಹ ಸಾದನೆಗೆ ಅಡ್ಡಿಯಾಗುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆಯಾದ ಅಂಗವಿಕಲರಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಣೆ, ತ್ರಿಚಕ್ರ ವಾಹನ ವಿತರಣೆ, ಗ್ರಂಥಾಲಯಕ್ಕೆ ದರ್ಶನಿ ಪರಿಕರಗಳು, ಲ್ಯಾಪ್ ಟಾಪ್, ಶ್ರವಣ ಸಾಧನಗಳು, ಪಿಂಚಣಿ ಆದೇಶದ ಪತ್ರ ಹಾಗೂ ಅಂಗನವಾಡಿಗಳಿಗೆ ಕಿಟ್ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಎಮ್.ಸುದರ್ಶನ್, ಪಂಚ ಗ್ಯಾರಂಟಿ ಅನುಷ್ಠಾನದ ತಾ.ಅಧ್ಯಕ್ಷ ಕಾಂತರಾಜು, ನಗರಸಭೆಯ ಪೌರಯುಕ್ತ ವಿಶ್ವೇಶ್ವರ ಬದರಗಡೆ, ಬಿಇಓ ತಾರಾಮಣಿ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ಚಿದಾನಂದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಕ್ಷಮ್ಮ, ಶಿಶು ಅಭಿವೃದ್ದಿ ಯೋಜನಾಧಿಕಾರಿ ದೀಪ ಹೆಬ್ಬಳ್ಳಿ, ಗ್ರೇಟ್ ೨ ತಹಸೀಲ್ದಾರ್ ಜಗನ್ನಾಥ್, ತಾ ಅಂಗವಿಕಲ ಸಂಘದ ಅಧ್ಯಕ್ಷ ಇನಾಯತ್, ಕಾರ್ಮಿಕ ಇಲಾಖೆಯ ಸುಶೀಲ, ಕಂದಾಯ ಇಲಾಖೆಯ ರಂಗಪ್ಪ, ಶಿಕ್ಷಣ ಇಲಾಖೆಯ ಮೋಹನ್, ಗ್ರಂಥಪಾಲಕ ಮೇಲ್ವಿಚಾರಕ ಶಂಕರಪ್ಪಬಳ್ಳೆಕಟ್ಟೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ತಾಲೂಕಿನ ಅಂಕವಿಕಲ ಚೇತನರು ಭಾಗವಹಿಸಿದ್ದರು. ನಗರಸಬೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಅಂಕವಿಕಲ ದಿನಾಚರಣೆ ಪ್ರಯುಕ್ತ ಹಲವಾರು ಸವಲತ್ತುಗಳನ್ನು ಶಾಸಕ ಕೆ.ಷಡಕ್ಷರಿ ವಿತರಣೆ ಮಾಡಿದರು.