ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ಪಟ್ಟಣದ ವಾರ್ಡ್‌ಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ತಾಲೂಕು ಜ್ಯಾತ್ಯತೀತ ಜನತಾ ದಳದಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಈರಣ್ಣ, ಪಟ್ಟಣದಲ್ಲಿ ಮೂಲ ಸೌಕರ್ಯಗಳು ಮರಿಚಿಕೆಯಾಗಿವೆ. ಯಾವುದೇ ಓಣಿಯಲ್ಲೂ ಸಹ ರಸ್ತೆ, ಚರಂಡಿಗಳು ಸರಿಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.ಮಾಜಿ ಪುರಸಭೆ ಸದಸ್ಯ ಗುಟ್ಟಹಳ್ಳಿ ಮಣಿ ಮಾತನಾಡಿ, 10 ದಿನಗಳಾದರು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುತ್ತಿಲ್ಲ, ಶುಚಿತ್ವ ಕಾಪಾಡುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮ ಸೊಳ್ಳೆ ಇತರೆ ಕ್ರಿಮಿಕೀಟಗಳ ಹಾವಳಿಯಿಂದ ಜನತೆ ತತ್ತರಿಸಿದ್ದಾರೆ. ಪಟ್ಟಣದ ಹಳೇ ಊರು ಸೇರಿಂತೆ ಇತರೇ ವಾರ್ಡ್‌ಗಳಿಗೆ ವಾರಕ್ಕೆ ಎರಡು ಬಾರಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಪಟ್ಟಣದ 23 ವಾರ್ಡ್‌ಗಳಲ್ಲಿ ಅಮೃತ್ ಯೋಜನೆಯ ನೀರಿನ ಪೈಪ್‌ಲೈನ್ ಕಾಮಗಾರಿಗೆ ಜೆಸಿಬಿಗಳಿಂದ ಬಗೆದ ಪರಿಣಾಮ ಬೃಹತ್ ಮಟ್ಟದ ಗುಂಡಿಗಳಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ತಕ್ಷಣ ರಸ್ತೆಗಳನ್ನು ಸರಿಪಡಿಸಬೇಕು. ಪಟ್ಟಣದ ನಾಲ್ಕು ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ರಾತ್ರಿ ವೇಳೆ ಸರಿಯಾಗಿ ಬೆಳಕು ಕೊಡುತ್ತಿಲ್ಲ. ಕಳ್ಳತನ ಹೆಚ್ಚುತ್ತಿವೆ. ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ಆಫ್-ಬಂಡೆ ಮತ್ತು ಕನುಮನಚೆರ್ಲು ನಿವಾಸಿಗಳು ಬಂಡೆ ಮೇಲೆ ವಾಸವಾಗಿದ್ದು, ಈ ಬಡಾವಣೆಗಳ ನಿವಾಸಿಗಳಿಗೆ ಕುಡಿಯುವ ನೀರು ಮತ್ತು ವಸತಿ ಹಾಗೂ ಇತರೆ ಮೂಲಭೂತ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಗೋವಿಂದಬಾಬು,ಪುರಸಭೆ ಮಾಜಿ ಸದಸ್ಯ ಮನುಮಹೇಶ್,ತಾಲೂಕು ಜೆಡಿಎಸ್ ರೈತ ಘಟಕದ ಅಧ್ಯಕ್ಷ ಗಂಗಾಧರ್ ನಾಯ್ಡ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಗಡ್ಡಂ ತಿಮ್ಮರಾಜು, ಮುಖಂಡರಾದ ಕಾವಲಗೆರೆ ರಾಮಾಂಜಿನಪ್ಪ, ಶಾಂತಿ ಮೆಡಿಕಲ್ ದೇವರಾಜ್, ಆಪ್‌ಬಂಡೆ ಗೋಪಾಲ್,ಶಾಂತಿ ನಗರದ ಸುಬ್ಬರಾಯಪ್ಪ,ಎನ್‌ಟಿಆರ್ ರಾಮು ಹಾಗೂ ಇತರೆ ಅನೇಕ ಮಂದಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿದ್ದರು.