ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಜಮೀನು ದಾರಿ ಸಮಸ್ಯೆ ಇಥ್ಯರ್ತಕ್ಕಾಗಿ ಕಾನೂನು ತಿದ್ದುಪಡಿ ಮಾಡಲು ಈ ಗಂಭೀರ ಸಮಸ್ಯೆಯನ್ನು ಅಧಿವೇಶನದಲ್ಲಿ ಚರ್ಚಿಸಿ ಕ್ರಮ ವಹಿಸುವಂತೆ ಆಗ್ರಹಿಸಿ ವಿಜಯಪುರದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಬೆಂಗಳೂರಿನ ಬಹುಮಹಡಿ ಕಟ್ಟದ ಆಯುಕ್ತಾಲಯದಲ್ಲಿ ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲ ಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಜಮೀನು ದಾರಿ ಸಮಸ್ಯೆ ಇಥ್ಯರ್ತಕ್ಕಾಗಿ ಕಾನೂನು ತಿದ್ದುಪಡಿ ಮಾಡಲು ಈ ಗಂಭೀರ ಸಮಸ್ಯೆಯನ್ನು ಅಧಿವೇಶನದಲ್ಲಿ ಚರ್ಚಿಸಿ ಕ್ರಮ ವಹಿಸುವಂತೆ ಆಗ್ರಹಿಸಿ ವಿಜಯಪುರದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಬೆಂಗಳೂರಿನ ಬಹುಮಹಡಿ ಕಟ್ಟದ ಆಯುಕ್ತಾಲಯದಲ್ಲಿ ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲ ಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ರಾಜ್ಯದ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಮುಂದಿನ ರೈತರು ದಾರಿ ಕೊಡದ ಕಾರಣ ಜಮೀನು ಬಿತ್ತನೆ ಮಾಡದೆ ಜಮೀನು ಪಾಳು ಬಿದ್ದು ರೈತ ಕುಟುಂಬಗಳು ಉಪವಾಸ ಬೀಳುವ ಪರಸ್ಥಿತಿ ನಿರ್ಮಾಣವಾಗಿದೆ. ಈ ವಿಷಯವಾಗಿ ಕಳೆದ ೧೦ ವರ್ಷಗಳಿಂದ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ನಂತರ ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಸುತ್ತೋಲೆ ಹೊರಡಿಸಿದೆ. ಆದರೆ ರಾಜ್ಯದ ಯಾವೊಬ್ಬ ತಹಸೀಲ್ದಾರ್‌ಗಳು ದಾರಿ ಮಾಡಿಕೊಟ್ಟ ಉದಾಹರಣೆ ಇಲ್ಲ ಎಂದು ದೂರಿದರು.
ತಹಸೀಲ್ದಾರ್‌ಗಳನ್ನು ಕೇಳಿದರೇ ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ದಾರಿ ಮಾಡಿಕೊಡಲು ಆದೇಶವಿಲ್ಲ. ಆದ್ದರಿಂದ ಮಾಡಿಕೊಡಲು ಸಾಧ್ಯವಿಲ್ಲ. ಇದರಿಂದ ಸರ್ಕಾರದ ಸುತ್ತೋಲೆಗೆ ಬೆಲೆ ಇಲ್ಲದಂತಾಗಿದೆ. ಜು.೧೫ ರಂದು ಪ್ರಾರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಜಮೀನಿನ ದಾರಿ ವಿಷಯವನ್ನು ಚರ್ಚಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಿ ತಹಸೀಲ್ದಾರ್‌ಗಳಿಗೆ ದಾರಿ ಮಾಡಿಕೊಡುವ ಅಧಿಕಾರ ವಹಿಸಿಕೊಡಬೇಕು. ತಡೆಯಾಜ್ಞೆ ತರದಂತೆ ಕಾನೂನು ತಿದ್ದುಪಡಿ ಮಾಡಬೇಕು. ಈ ಗಂಭೀರ ಸಮಸ್ಯೆಯನ್ನು ಅಧಿವೇಶನದಲ್ಲಿ ಚರ್ಚಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಅರವಿಂದ ಕುಲಕರ್ಣಿ, ಪಾಂಡು ಹ್ಯಾಟಿ, ವಿಠ್ಠಲ ಬಿರಾದಾರ, ಹೊನಕೇರಪ್ಪ ತೆಲಗಿ, ಮಲಗೆಪ್ಪ ಸಾಸನೂರ, ಲಾಲಸಾಬ ಹಳ್ಳೂರ, ಬಸಪ್ಪ ತೋಟದ, ಮುದನೂರ ಬಿ.ಗ್ರಾಮದ ಜಯಕರ್ನಾಟಕ ಸಂಘಟನೆ ಹುಣಸಗಿ ತಾಲೂಕಾಧ್ಯಕ್ಷ ಪ್ರಭುಗೌಡ ಪೋತರಡ್ಡಿ ಮುಂತಾದವರು ಇದ್ದರು.