ಹೊರಗುತ್ತಿಗೆ ನೌಕರರಿಗೆ ಬೀದರ್ ಮಾದರಿಯಲ್ಲಿ ವೇತನ ಪಾವತಿಗೆ ಮನವಿ

| Published : Dec 10 2024, 12:30 AM IST

ಹೊರಗುತ್ತಿಗೆ ನೌಕರರಿಗೆ ಬೀದರ್ ಮಾದರಿಯಲ್ಲಿ ವೇತನ ಪಾವತಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಬೀದರ್ ಜಿಲ್ಲೆಯ ಮಾದರಿಯಂತೆ ವೇತನ ಪಾವತಿಸುವಂತೆ ಒತ್ತಾಯಿಸಿ ಶ್ರೀ ಮಹರ್ಷಿ ವಾಲ್ಮೀಕಿ ಹೊರಗುತ್ತಿಗೆ ನೌಕರರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹಾವೇರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಬೀದರ್ ಜಿಲ್ಲೆಯ ಮಾದರಿಯಂತೆ ವೇತನ ಪಾವತಿಸುವಂತೆ ಒತ್ತಾಯಿಸಿ ಶ್ರೀ ಮಹರ್ಷಿ ವಾಲ್ಮೀಕಿ ಹೊರಗುತ್ತಿಗೆ ನೌಕರರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳ ಮೂಲಕ ಹಲವಾರು ಶೋಷಣೆಗಳು ಆಗುತ್ತಿರುವುದರಿಂದ ನೌಕರರ ಜೀವನವನ್ನು ನಡೆಸುವುದು ಕಷ್ಟವಾಗಿದೆ. ಸರಿಯಾದ ಸಮಯಕ್ಕೆ ವೇತನವಾಗದೇ ನೌಕರರು ಪರದಾಡುವಂತಾಗಿದೆ. ಸರಿಯಾದ ಸಮಯಕ್ಕೆ ವೇತನವಾಗದೇ ನೌಕರರ ಕುಟುಂಬಗಳನ್ನು ನಿಭಾಯಿಸಲು ಹರಸಾಹಸ ಪಡುವಂತಾಗಿದೆ. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಇಲ್ಲದೆ ಅಲೆದಾಡುವಂತಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.ಪ್ರತಿ ವರ್ಷಕ್ಕೊಂದು ಏಜೆನ್ಸಿಗಳ ಮೂಲಕ ವೇತನವನ್ನು ನೀಡಲು ಪ್ರತಿ ವರ್ಷ ೧೦ರಿಂದ ೨೦ಸಾವಿರ ರು.ದವರೆಗೆ ಏಜೆನ್ಸಿಗಳು ಬೇಡಿಕೆ ಇಡುತ್ತಾರೆ ಮತ್ತು ಸರಿಯಾದ ಸಮಯಕ್ಕೆ ವೇತನ ಪಿಎಫ್‌ಇಎಫ್, ಇಎಸ್‌ಐ ಸೇರಿದಂತೆ ಯಾವುದನ್ನೂ ಸರಿಯಾಗಿ ಭರಣ ಮಾಡುವುದಿಲ್ಲ. ಇನ್ನು ಹಲವಾರು ಶೋಷಣೆಗಳನ್ನು ಆಗುತ್ತಿರುವುದರಿಂದ ಹೊರಗುತ್ತಿಗೆ ನೌಕರರು ಗೋಳಾಡುತ್ತಿದ್ದಾರೆ. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಬೇಕು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೀದರ್ ಜಿಲ್ಲೆಯ ಮಾದರಿಯಂತೆ ಜಿಲ್ಲಾ ಮಟ್ಟದಲ್ಲಿ ವಿವಿಧೋದ್ದೇಶ ಸಹಕಾರಿ ಸಂಘವನ್ನು ರಚಿಸಿ ಹೊರಗುತ್ತಿಗೆ ನೌಕರರಿಗೆ ವೇತನ ಮತ್ತು ಇಪಿಎಫ್, ಇಎಸ್‌ಐ ನೀಡಬೇಕು ಎಂದು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು. ಮಹರ್ಷಿ ವಾಲ್ಮೀಕಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ ಕರೆಬಸಪ್ಪನವರ, ಸಂಘದ ಎಲ್ಲಾ ಸದಸ್ಯರುಗಳು ಪಾಲ್ಗೊಂಡಿದ್ದರು.