ಪರೀಕ್ಷಾ ಶುಲ್ಕ ಏರಿಕೆ ವಿರೋಧಿಸಿ ಎಬಿವಿಪಿಯಿಂದ ಮಂಗಳೂರು ವಿವಿ ಕುಲಪತಿಗೆ ಮನವಿ

| Published : Nov 13 2024, 12:06 AM IST

ಪರೀಕ್ಷಾ ಶುಲ್ಕ ಏರಿಕೆ ವಿರೋಧಿಸಿ ಎಬಿವಿಪಿಯಿಂದ ಮಂಗಳೂರು ವಿವಿ ಕುಲಪತಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ನಿಯೋಗವು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಭೇಟಿ ಮಾಡಿ ವಿವಿಯ ವಿವಿಧ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇದನ್ನು ಬಗೆಹರಿಸುವಂತೆ ಆಗ್ರಹಿಸಿತು. ತಪ್ಪಿದ್ದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ನಿಯೋಗವು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಭೇಟಿ ಮಾಡಿ ವಿವಿಯ ವಿವಿಧ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇದನ್ನು ಬಗೆಹರಿಸುವಂತೆ ಆಗ್ರಹಿಸಿತು. ತಪ್ಪಿದ್ದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.ಪ್ರಸಕ್ತ ಸಾಲಿನಲ್ಲಿ ವಿವಿಯು ಪರೀಕ್ಷಾ ಶುಲ್ಕವನ್ನು ಏಕಾಏಕಿ ಶೇ.50-60ರಷ್ಟು ಏರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಣದ ಬರೆಯನ್ನು ಎಳೆದಿದ್ದಾರೆ. ಇದಲ್ಲದೆ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರ ಕೊರತೆ, ಅಂಕಪಟ್ಟಿ ಕುರಿತು ಇರುವಂತಹ ಯುಯುಸಿಎಂಎಸ್‌ನ ತಾಂತ್ರಿಕ ಸಮಸ್ಯೆಗಳು ಹಾಗೂ ಇತರ ಮೂಲಭೂತ ಸಮಸ್ಯೆಗಳು ವಿವಿಯನ್ನು ಸಮಸ್ಯೆಯ ಗೂಡಾಗಿ ಪರಿವರ್ತಿಸಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.ಈ ಎಲ್ಲ ಸಮಸ್ಯೆಗಳನ್ನು ಆಲಿಸಿದ ಕುಲಪತಿಗಳು ಇದಕ್ಕೆಲ್ಲ ಕಾರಣ ಕಳೆದ 6 ವರ್ಷಗಳಿಂದ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಧನ ಸಹಾಯ ಬಾರದೇ ಇರುವುದು. ಇದರಿಂದಾಗಿ ಬೇರೆ ಯಾವುದೇ ದಾರಿ ಇಲ್ಲದೆ ವಿದ್ಯಾರ್ಥಿಗಳ ಮೂಲಕವೇ ಶುಲ್ಕವನ್ನು ಪಡೆದು ವ್ಯವಸ್ಥೆಯನ್ನು ಕಲ್ಪಿಸುವ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಎಲ್ಲಾ ಅಗತ್ಯತೆಗಳನ್ನು ಸರಿಯಾಗಿ ಪೂರೈಸಲು ಕಷ್ಟ ಸಾಧ್ಯವಾಗುತ್ತಿದೆ ಎಂದು ತಮ್ಮ ಅಸಹಾಯಕ ಸ್ಥಿತಿಯನ್ನು ಹೇಳಿಕೊಂಡರು.ಈ ಸಂದರ್ಭ ಎಬಿವಿಪಿ ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಮಹಾನಗರ ಕಾರ್ಯದರ್ಶಿ ಮೊನಿಶ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಿತೇಶ್ ಹಾಗೂ ಪ್ರಮುಖರಾದ ಹರ್ಷ ಮತ್ತಿತರರಿದ್ದರು.