ಸಾರಾಂಶ
ಅರಣ್ಯ ಹಕ್ಕು ಕಾಯ್ದೆ ೨೦೦೬ರ ಸಮಗ್ರ ಅನುಷ್ಠಾನದಲ್ಲಿ ಉಂಟಾಗಿರುವ ಅಡಚಣೆ, ಪುನರ್ ಪರಿಶೀಲನೆ ಪ್ರಕ್ರಿಯೆಯ ಗೊಂದಲ ಹಾಗೂ ಫಲಾನುಭವಿಗಳ ಹಕ್ಕುಪತ್ರ ನೀಡುವಿಕೆ ತೊಂದರೆಗಳ ಕುರಿತು ಮುಂಡಗೋಡ ತಾಲೂಕು ಭೂ ಹಕ್ಕುದಾರರ ಹಿತರಕ್ಷಣಾ ವೇದಿಕೆಯ ನಿಯೋಗವು ಬುಡಕಟ್ಟು ಕಲ್ಯಾಣ ಇಲಾಖೆಯ ರಾಜ್ಯ ಕಾರ್ಯದರ್ಶಿ ಡಿ. ರಣದೀಪ್(ಐಎಎಸ್) ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿತು.
ಮುಂಡಗೋಡ:
ಅರಣ್ಯ ಹಕ್ಕು ಕಾಯ್ದೆ ೨೦೦೬ರ ಸಮಗ್ರ ಅನುಷ್ಠಾನದಲ್ಲಿ ಉಂಟಾಗಿರುವ ಅಡಚಣೆ, ಪುನರ್ ಪರಿಶೀಲನೆ ಪ್ರಕ್ರಿಯೆಯ ಗೊಂದಲ ಹಾಗೂ ಫಲಾನುಭವಿಗಳ ಹಕ್ಕುಪತ್ರ ನೀಡುವಿಕೆ ತೊಂದರೆಗಳ ಕುರಿತು ಮುಂಡಗೋಡ ತಾಲೂಕು ಭೂ ಹಕ್ಕುದಾರರ ಹಿತರಕ್ಷಣಾ ವೇದಿಕೆಯ ನಿಯೋಗವು ಬುಡಕಟ್ಟು ಕಲ್ಯಾಣ ಇಲಾಖೆಯ ರಾಜ್ಯ ಕಾರ್ಯದರ್ಶಿ ಡಿ. ರಣದೀಪ್(ಐಎಎಸ್) ಅವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿತು.ಚರ್ಚೆಯಲ್ಲಿ ನಿಯೋಗವು ತಿರಸ್ಕ್ರತ ಅರ್ಜಿಗಳ ಪುನರ್ ಪರಿಶೀಲನೆ ವೇಳೆ ದಾಖಲೆಗಳ ಸ್ಪಷ್ಟತೆ, ಜಿಪಿಎಸ್ ವರದಿ ಯ ತಪ್ಪುಗಳ ಸರಿಪಡಣೆ, ಹಕ್ಕು ಪತ್ರ ಪಡೆದವರಿಗೆ ಪಹಣಿ ವಿತರಣೆ, ಹಾಗೂ ಸಮಿತಿಗಳ ಕಾರ್ಯ ನಿರ್ವಹಣೆಯ ಸ್ಥಗಿತದ ಕುರಿತು ವಿಷಯಗಳನ್ನು ಪ್ರಸ್ತಾಪಿಸಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯದರ್ಶಿಗಳು, ಪಂಚಾಯಿತಿ ಮಟ್ಟದಲ್ಲಿ ತಿಳುವಳಿಕೆ ಶಿಬಿರ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ಕಡಿಮೆ ಜಮೀನು ನೀಡಿದ ಪ್ರಕರಣಗಳ ಪುನರ್ ಪರಿಶೀಲನೆಗೆ ಜಿಲ್ಲಾ ಮಟ್ಟದ ಸಮಿತಿಗಳಿಗೆ ನಿರ್ದೇಶನ ನೀಡುವುದಾಗಿ ಹೇಳಿದ ಅವರು, ಡಿಸೆಂಬರ್‌ನಲ್ಲಿ ಪಂಚಾಯಿತಿ ಚುನಾವಣೆಗಳು ನಡೆಯಲಿದ್ದು, ಸಮಿತಿಗಳ ಕಾರ್ಯ ಮರು ಪ್ರಾರಂಭವಾಗಲಿದೆ. ಅರಣ್ಯ ಸಂಪನ್ಮೂಲದ ಮೇಲಿನ ಸಮುದಾಯ ಹಕ್ಕು (ನಮೂನೆ-ಸಿ) ಕುರಿತು ತಿಳುವಳಿಕೆ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಮಟ್ಟದ ಅರಣ್ಯ ಭೂಮಿ ಹಕ್ಕು ಸಮಿತಿ ಸಲಹಾ ಸಮಿತಿಯ ಸಭೆ ಶೀಘ್ರದಲ್ಲೆ ನಡೆಯಲಿದ್ದು, ಈ ಮನವಿಯಲ್ಲಿರುವ ಎಲ್ಲಾ ವಿಷಯಗಳನ್ನು ಅಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭ ಹೇಮಲಪ್ಪ ಲಮಾಣಿ, ಬೀರು ಕಾತ್ರಟ್, ಜಾನ್ ಬಿಳ್ಕಿಕರ್, ಬೇನಿಥ್, ಜುಲಿಯಾನಾ ಸಿದ್ದಿ, ಲೋಕೇಶ ಗೌಡ, ಫಾದರ್ ಅಲ್ವಿನ್ ಡಿಸೊಜಾ, ಪಾದರ್ ವಿಕ್ಟರ್ ಮುಂತಾದವರು ನಿಯೋಗದಲ್ಲಿ ಪಾಲ್ಗೊಂಡಿದ್ದರು.