ಟೈಲರ್ಸ್ ಅಸೋಸಿಯನ್‌ನಿಂದ ಡಿಸಿ, ಎಸ್ಪಿಗೆ ಮನವಿ

| Published : Jun 25 2024, 12:31 AM IST

ಸಾರಾಂಶ

ಕುಂದಾಪುರ ತಾಲೂಕಿನ ಬಿಜಾಡಿ ತೀರದಲ್ಲಿ ತುಮಕೂರು ಜಿಲ್ಲೆ ತಿಪಟೂರು ತಾಲೂಕು ನಿವಾಸಿ ರಾಜೇಶ್ ಟೈಲರ್ ಅವರ ಮಗ ಯೋಗೇಶ್ ಕೊಚ್ಚಿ ಹೋಗಿದ್ದು, ಅವರ ಮೃತದೇಹ ಹುಡುಕುವಂತೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇತ್ತೀಚೆಗೆ ಕುಂದಾಪುರ ತಾಲೂಕಿನ ಬಿಜಾಡಿ ತೀರದಲ್ಲಿ ತುಮಕೂರು ಜಿಲ್ಲೆ ತಿಪಟೂರು ತಾಲೂಕು ನಿವಾಸಿ ರಾಜೇಶ್ ಟೈಲರ್ ಅವರ ಮಗ ಯೋಗೇಶ್ (22) ಆಕಸ್ಮಿಕವಾಗಿ ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆದರೆ ಅವರ ಮೃತದೇಹ ಇದುವರೆಗೂ ಸಿಕ್ಕಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಸೋಮವಾರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿತು.

ಈ ಸಂದರ್ಭ ಉಡುಪಿ ಜಿಲ್ಲಾ ಟೈಲರ್ಸ್ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ್ ಕೋಟ್ಯಾನ್ ಕೊರಂಗ್ರಪಾಡಿ, ರಾಜ್ಯ ಸಮಿತಿಯ ಕಾರ್ಯದರ್ಶಿ ಶಾಂತ ಬಸ್ರೂರು, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಪಾಲನ್, ಪ್ರಧಾನ ಕಾರ್ಯದರ್ಶಿ ದಯಾನಂದ ಪ್ರಭು ಹಿರಿಯಡ್ಕ, ಅಜ್ಜರಕಾಡು ನಗರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುವಾಸಿನಿ ಜತ್ತನ್ನ ರಾಜೀವನಗರ, ವಲಯ ಸಮಿತಿ ಅಧ್ಯಕ್ಷೆ ಅನಿತಾ, ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಮೀನಾಕ್ಷಿ ಆಚಾರ್ಯ, ಶ್ರೀಧರ್ ಆಚಾರ್ಯ ಹಿರಿಯಡ್ಕ, ದಮಯಂತಿ ರಾಜೀವ್ ನಗರ, ಪುಷ್ಪಾವತಿ ನಾಯಕ್, ನಾಗವೇಣಿ ಮತ್ತು ಖಾದರ್ ಬೀ ಹಾಗೂ ಬಾಬು ಹಿರಿಯಡ್ಕ ಮುಂತಾದವರು ಉಪಸ್ಥಿತರಿದ್ದರು.