ಸಾರಾಂಶ
ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ ಹೆಚ್ಚುತ್ತಿದೆ. ಅಲ್ಲದೆ ಯುನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯವಾಟಿಕೆ, ಅನೈತಿಕ ದಂಧೆಗಳು ನಡೆಯುತ್ತಿದೆ. ಜನಪ್ರತಿನಿಧಿಗಳಿಗೆ, ಮಹಾನಗರ ಪಾಲಿಕೆ ಕಮಿಷನರ್, ಮೇಯರ್‌ಗೆ ಮತ್ತು ಪೊಲೀಸ್ ಇಲಾಖೆಗೆ ಈ ದಂಧೆಗೆ ಕಡಿವಾಣ ಹಾಕಲು ಮನವಿ ಮಾಡಲಾಗಿದೆ ಎಂದು ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಲ್ಲಿ ಯೂನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ, ಅನೈತಿಕ ದಂಧೆ ನಡೆಸುತ್ತಿರುವವರ ಪರವಾನಿಗೆ ರದ್ದು ಮಾಡಲು ಆಗ್ರಹಿಸಿ ಬಜರಂಗದಳ, ದುರ್ಗಾವಾಹಿನಿ ಸಂಘಟನೆಗಳು ಶುಕ್ರವಾರ ಮಹಾನಗರ ಪಾಲಿಕೆ ಮೇಯರ್ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದೆ. ಸುಸಂಸ್ಕೃತ ನಗರವಾದ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ ಹೆಚ್ಚುತ್ತಿದೆ. ಅಲ್ಲದೆ ಯುನಿಸೆಕ್ಸ್ ಸಲೂನ್, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯವಾಟಿಕೆ, ಅನೈತಿಕ ದಂಧೆಗಳು ನಡೆಯುತ್ತಿದೆ. ಈ ದಂಧೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಪ್ರೇರೇಪಿಸಲಾಗುತ್ತಿದೆ. ಹಾಗೆಯೇ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಈ ದಂಧೆಯಲ್ಲಿ ಬಳಸಲಾಗುತ್ತಿದೆ ಎಂದು ಕೇಳಿ ಬರುತ್ತಿದೆ. ಈ ಸಂಬಂಧಿಸಿ ಜನಪ್ರತಿನಿಧಿಗಳಿಗೆ, ಮಹಾನಗರ ಪಾಲಿಕೆ ಕಮಿಷನರ್, ಮೇಯರ್‌ಗೆ ಮತ್ತು ಪೊಲೀಸ್ ಇಲಾಖೆಗೆ ಈ ದಂಧೆಗೆ ಕಡಿವಾಣ ಹಾಕಲು ಮನವಿ ಮಾಡಲಾಗಿದೆ ಎಂದು ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ ತಿಳಿಸಿದ್ದಾರೆ.ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ, ದುರ್ಗಾ ವಾಹಿನಿ ಸಂಯೋಜಕಿ ಶ್ವೇತಾ ಇದ್ದರು.