ಗೋವಂಶ ಬಲಿ ಹಾಗೂ ಗೋವು ಸಾಗಾಣಿಕೆ ನಿಷೇಧಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹಿರೇಕೆರೂರು ತಹಸೀಲ್ದಾರ್‌ ಹಾಗೂ ವೃತ್ತಆರಕ್ಷಕ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಹಿರೇಕೆರೂರು: ಗೋವಂಶ ಬಲಿ ಹಾಗೂ ಗೋವು ಸಾಗಾಣಿಕೆ ನಿಷೇಧಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಹಸೀಲ್ದಾರ್‌ ಹಾಗೂ ವೃತ್ತಆರಕ್ಷಕ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಜಾರಿಯಲ್ಲಿದೆ. ಇದರಂತೆ ಯಾವುದೇ ವಯಸ್ಸಿನ ದನ, ಹೋರಿ, ಕರುಗಳನ್ನು ಯಾವುದೇ ರೀತಿಯಲ್ಲಿ ಕೊಲ್ಲುವುದನ್ನು ನಿಷೇಧಿಸಲಾಗಿದೆ. ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಗೋವಂಶ ಬಲಿ ಕೊಡುವ ಸಂಭವ ಇರುವುದರಿಂದ ಯಾವುದೇ ಕಾರಣಕ್ಕೂ ಗೋವಂಶ ಬಲಿ ಕೊಡದಂತೆ ಈ ಕಾನೂನು ಹಾಗೂ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಅದೇ ತೆರನಾಗಿ ಹಿಂಸಾತ್ಮಕ ಗೋ ಸಾಗಾಟ ಆಗದಂತೆ ಇರುವ ನಿಯಮಾವಳಿ 2021 ಜಾರಿಯಲ್ಲಿದ್ದು, ಅದು ಕೂಡಾ ಪಾಲನೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಆಯಕಟ್ಟಿನ ಜಾಗಗಳಲ್ಲಿ ನಾಕಾಬಂದಿ ಹಾಕಬೇಕು. ಅಕ್ರಮ ಕಸಾಯಿಖಾನೆ ಹಾಗೂ ಗೋ ಬಲಿ ಆಗುವ ಸಂಭಾವ್ಯ ಸ್ಥಳಗಳಲ್ಲಿ ಪೊಲೀಸ್ ನಿಗಾ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಹಿಂದೂ ಜಾಗರಣಾ ವೇದಿಕೆ ತಾಲೂಕು ಸಂಯೋಜಕ ಚಂದ್ರಶೇಖರ ತೇರೆದಹಳ್ಳಿ, ಹಾಲೇಶ ಆರೀಕಟ್ಟಿ, ಭೋಜೇಗೌಡ ನೂಲಗೇರಿ, ಪುನೀತ್ ಮಡಿವಾಳರ, ಧೀರಜ ಕೊಲ್ಲಾಪುರ, ಶಿವು ಸೋಮಲಾಪುರ, ನಂದೀಶ ತಿಪ್ಪಕ್ಕಳವರ, ಮಲ್ಲಿಕಾರ್ಜುನ, ಪ್ರಸಾದ ಗುಜ್ಜರ್, ಪ್ರಮೋದ ಮಡಿವಾಳರ, ಧರ್ಮರಾಜ ಎತ್ತಿನಹಳ್ಳಿ, ಶಿವಕುಮಾರ ಪ್ಯಾಟೇರ, ತಿಲಕ್‌ ಚಕ್ರಸಾಲಿ ಹಾಗೂ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿದ್ದರು.