ರೋಡ್ ಹಂಪ್ಸ್ ನಿರ್ಮಿಸಲು ಮನವಿ

| Published : Dec 24 2024, 12:46 AM IST

ಸಾರಾಂಶ

ಶಾಲೆ ಪರಿಸರದಲ್ಲಿನ ರಸ್ತೆಗೆ ಹಂಪ್‌ಗಳನ್ನು ಅಳವಡಿಸುವ ಮೂಲಕ ಅಪಘಾತ ತಪ್ಪಿಸಿ ಎಂದು ಇಲ್ಲಿನ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಮಕ್ಕಳು ಮತ್ತು ಶಿಕ್ಷಕರು ಪುರಸಭೆ ಹಾಗೂ ಪೊಲೀಸರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಾರಟಗಿ

ಶಾಲೆ ಪರಿಸರದಲ್ಲಿನ ರಸ್ತೆಗೆ ಹಂಪ್‌ಗಳನ್ನು ಅಳವಡಿಸುವ ಮೂಲಕ ಅಪಘಾತ ತಪ್ಪಿಸಿ ಎಂದು ಇಲ್ಲಿನ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಮಕ್ಕಳು ಮತ್ತು ಶಿಕ್ಷಕರು ಪುರಸಭೆ ಹಾಗೂ ಪೊಲೀಸರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಹಾದು ಹೋಗಿರುವ ಆರ್.ಜಿ. ರಸ್ತೆ ರಾಜ್ಯ ಹೆದ್ದಾರಿಯಲ್ಲಿರುವ ಶರಣಬಸವೇಶ್ವರ ವಿದ್ಯಾಸಂಸ್ಥೆ ಸೇರಿದಂತೆ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ಮುಂದೆ ರಸ್ತೆಗೆ ಹಂಪ್ಸ್ ಅಳವಡಿಸಿ ಅಪಘಾತ ತಪ್ಪಿಸುವಂತೆ ಮನವಿ ಮಾಡಿದರು.

ಮುಖ್ಯ ಶಿಕ್ಷಕ ಅಮರೇಶ ಪಾಟೀಲ್ ಮಾತನಾಡಿ, ಈ ಸ್ಥಳದಲ್ಲಿಯೇ ಹತ್ತು ಹಲವು ಅಪಘಾತಗಳು ಸಂಭವಿಸಿವೆ. ಹಂಪ್ಸ್ ಇಲ್ಲದಕ್ಕೆ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತವೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಬರುವಾಗಿ ಹೋಗುವಾಗ ಜೀವನ್ನು ಭಯದಲ್ಲಿಟ್ಟುಕೊಂಡು ಓಡಾಡಬೇಕಿದೆ. ಸಾರ್ವಜನಿಕರು, ದನಕರುಗಳಿಗೆ ಸಂಚರಿಸಲು ತೊಂದರೆಯಾಗಿದೆ. ಹಾಗಾಗಿ ಕೂಡಲೇ ಈ ಎಲ್ಲಾ ಸ್ಥಳಗಳಲ್ಲಿ ಹಂಪ್ಸ್‌ಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಮಾತನಾಡಿ, ಈ ಕುರಿತು ಈ ಭಾಗದ ರಸ್ತೆ ನಿರ್ವಹಣೆಯ ಹೊಣೆ ಹೊತ್ತಿರುವ ಮರಳಿ ಬಳಿಯ ಟೋಲ್ ಕಂಪನಿಯ ವ್ಯವಸ್ಥಾಪಕರಿಗೆ ಎಲ್ಲೆಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ನಿರ್ಮಾಣ ಮಾಡಬೇಕು ಅಲ್ಲೆಲ್ಲ ಹಂಪ್ಸ್‌ ನಿರ್ಮಿಸಿ ಕೊಡಬೇಕೆಂದು ಅವರ ಗಮನಕ್ಕೆ ತಂದು ಅಪಘಾತ ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಸ್ಥಳೀಯ ಪೊಲೀಸ್ ಠಾಣೆಗೂ ತೆರಳಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಚಲುವಾದಿ, ಮುಖ್ಯಗುರು ವೀರೇಶ ಮ್ಯಾಗೇರಿ, ಶಿಕ್ಷಕರಾದ ಜಗದೀಶ ಭಜಂತ್ರಿ, ಜಗದೀಶ ಹಳ್ಳೂರು, ಇಬ್ರಾಹಿಂ ಆಮದಿಹಾಳ, ಸುರೇಶ ಭೋವಿ ಮಕ್ಕಳು ಇದ್ದರು.