ಕೊಪ್ಪಅಸಗೋಡು ಗ್ರಾಪಂ ವ್ಯಾಪ್ತಿಯ ಹವಾಮಾನ ಮಾಪನಗಳನ್ನು ದುರಸ್ಥಿ ಪಡಿಸಿ ಸ್ಥಳೀಯ ಗ್ರಾಮಸ್ಥರು ಮಳೆ ಮಾಪನಗಳನ್ನು ಪರಿಶೀಲಿಸಿ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಬಿಡುಗಡೆಗೊಳಿಸುವಂತೆ ಕೋರಿ ತಮ್ಮಡದಳ್ಳಿ ಕುಣಿಮಕ್ಕಿ ಮತ್ತು ಮೇಲ್‌ಬಿಳ್ಳಿ ಗ್ರಾಮಸ್ಥರು ಸೋಮವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಲಿಖಿತ ಮೋಹನ್ ಮುಖೇನ ಪ್ರಧಾನಮಂತ್ರಿ, ಸಂಸದರು, ರಾಜ್ಯದ ಕಂದಾಯ ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ, ಕೊಪ್ಪ

ಅಸಗೋಡು ಗ್ರಾಪಂ ವ್ಯಾಪ್ತಿಯ ಹವಾಮಾನ ಮಾಪನಗಳನ್ನು ದುರಸ್ಥಿ ಪಡಿಸಿ ಸ್ಥಳೀಯ ಗ್ರಾಮಸ್ಥರು ಮಳೆ ಮಾಪನಗಳನ್ನು ಪರಿಶೀಲಿಸಿ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಬಿಡುಗಡೆಗೊಳಿಸುವಂತೆ ಕೋರಿ ತಮ್ಮಡದಳ್ಳಿ ಕುಣಿಮಕ್ಕಿ ಮತ್ತು ಮೇಲ್‌ಬಿಳ್ಳಿ ಗ್ರಾಮಸ್ಥರು ಸೋಮವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಲಿಖಿತ ಮೋಹನ್ ಮುಖೇನ ಪ್ರಧಾನಮಂತ್ರಿ, ಸಂಸದರು, ರಾಜ್ಯದ ಕಂದಾಯ ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಆಸಗೋಡು ಗ್ರಾಪಂ ಮಟ್ಟದಲ್ಲಿ ಮಳೆ ಮಾಪನ ಆಳವಡಿಸಲಾಗಿದ್ದು ಕಳೆದ ೨೦೨೩-೨೪ನೇ ಸಾಲಿನಲ್ಲಿ ಈ ಮಾಪನ ಹಾಳಾಗಿದೆ. ಸದರಿ ವಿಷಯವನ್ನು ಈಗಾಗಲೇ ತಮ್ಮ ಇಲಾಖೆ ಗಮನಕ್ಕೆ ತರಲಾಗಿದೆ. ಆದಾಗ್ಯೂ ಇದರ ದುರಸ್ಥಿ ಕಾರ್ಯ ಕೈಗೊಂಡಿ ರುವುದಿಲ್ಲ. ಮಾತ್ರವಲ್ಲದೇ ಅಸಗೋಡು ಗ್ರಾಪಂ ವ್ಯಾಪ್ತಿಯ ರೈತರಿಗೆ ಹವಾಮಾನ ಆಧಾರಿತ ವಿಮೆ ಘೋಷಣೆ ಮಾಡಲಾಗಿದ್ದು ಕಳೆದ ಮೂರುವರ್ಷಗಳಲ್ಲಿ ಪ್ರತಿವರ್ಷ ೧೫೦ ಇಂಚು ಮಳೆ ಬಿದ್ದಿದ್ದು ಸ್ಥಳೀಯವಾಗಿ ರೈತರು ತಮ್ಮ ನಿವಾಸಗಳಲ್ಲಿ ಅಳೆದಿರುವ ಮಳೆ ಮಾಪನದಿಂದ ದೃಢಪಟ್ಟಿದೆ. ಉಲ್ಲೇಖಿತ ಪತ್ರದಂತೆ ಮಳೆಮಾಪನ ದುರಸ್ಥಿಯಾಗದಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೋರಿದ್ದರೂ ಸಹ ಯಾವುದೇ ಕಂದಾಯ ಆಥವಾ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆಗೆ ಬಾರದೇ ಇರುವುದನ್ನು ನಾವು ಗಮನಿಸಿರುತ್ತೇವೆ.

ಕಂದಾಯ ಇಲಾಖೆಯಿಂದ ಹವಾಮಾನ ಆಧಾರಿತ ಬೆಳೆ ವಿಮೆ ಬಿಡುಗಡೆಗೊಳಿಸಲಾಗುತ್ತಿದ್ದು ಇಲ್ಲಿ ಅತ್ಯಂತ ಕಡಿಮೆ ಮಳೆ ಬಿದ್ದಿರುವುದಾಗಿ ಮಾಹಿತಿ ಪಡೆದು ಅತ್ಯಂತ ಕಡಿಮೆ ಮೊತ್ತದ ಬೆಳೆ ವಿಮೆ ಪರಿಹಾರ ಘೋಷಿಸಲಾಗುತ್ತಿದೆ. ಇದರಿಂದ ರೈತ ಸಮೂಹಕ್ಕೆ ಅತ್ಯಂತ ಅನ್ಯಾಯವಾಗಿದ್ದು ತಕ್ಷಣವೇ ಮಳೆ ಪ್ರಮಾಣದ ವರದಿಯನ್ನು ಸ್ಥಳೀಯವಾಗಿ ಮಳೆ ಮಾಪನ ಮಾಡಿರುವ ರೈತರಿಂದ ಪಡೆದು ಅದರಂತೆ ಅತ್ಯಂತ ಹೆಚ್ಚು ಮಳೆ ಬಿದ್ದಿರುವ ಪ್ರದೇಶದಕ್ಕೆ ಘೋಷಿಸಿರುವ ಬೆಳೆ ವಿಮೆ ಮೊತ್ತವನ್ನು ಅಸುಗೋಡು ಗ್ರಾಮ ಪಂಚಾಯ್ತಿಗೂ ಸಹ ಘೋಷಿಸಿ ಅಲಾಖೆಯಿಂದ ನಡೆದಿರುವ ಪ್ರಮಾದ ಸರಿಪಡಿಸಿ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ತಮ್ಮಲ್ಲಿ ಕೋರುತ್ತೇವೆ. ನಮ್ಮ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬಿದ್ದ ಮಳೆ ಪ್ರಮಾಣ ಪರಿಶೀಲಿಸಿದ ನಂತರದಲ್ಲಿ ಬೆಳೆ ವಿಮಾ ಪರಿಹಾರದ ಮೊತ್ತವನ್ನು ಪುನರ್ ವಿಮರ್ಶೆ ಮಾಡಿ ಆತೀ ಹೆಚ್ಚು ಮಳೆ ಯಾದ ಪ್ರದೇಶಕ್ಕೆ ಬಿಡುಗಡೆಗೊಳಿಸಿದ ಮೊತ್ತವನ್ನು ಅಸಗೋಡು ಗ್ರಾಪಂ ವ್ಯಾಪ್ತಿಗೂ ಘೋಷಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.