ಸಾರಾಂಶ
ಚಿಕ್ಕಮಗಳೂರು, ಕಾಫಿ ತೋಟಗಳಲ್ಲಿ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್‌ಗಳಿಗೆ ಆರ್‌ಟಿಒ ಇಲಾಖೆ ಅಡ್ಡಿಪಡದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ರೈತ ಸಂಘದ ಮುಖಂಡರ ಕೋರಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿ ತೋಟಗಳಲ್ಲಿ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್‌ಗಳಿಗೆ ಆರ್‌ಟಿಒ ಇಲಾಖೆ ಅಡ್ಡಿಪಡದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ತೋಟದಿಂದ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್ ಮಾಲೀಕರು ಒಪ್ಪದಿರುವ ಸಂದರ್ಭದಲ್ಲಿ, ತೋಟದ ಹಾಗೂ ಟಿಂಬರ್ ಮಾಲೀಕರು ಸೇರಿ ಲಿಖಿತವಾಗಿ 20 ಕಿ.ಮೀ.ವರೆಗೆ ಟ್ರ್ಯಾಕ್ಟರ್ ಮುಖಾಂತರ ಸಾಗಿಸಲು ಒಪ್ಪಂದ ಮಾಡಿಕೊಂಡಿರುತ್ತಾರೆ ಎಂದು ಹೇಳಿದರು.ಈಗಾಗಲೇ ಅನೇಕ ವರ್ಷಗಳಿಂದ ಕಾಫಿ ತೋಟಗಳಿಂದ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಭಾರೀ ವಾಹನಗಳು ಕಾಫೀ ತೋಟಗಳಲ್ಲಿ ಓಡಾಡಲು ಸಾಧ್ಯವಿಲ್ಲದ ಕಾರಣ ತೋಟದ ಮಾಲೀಕರು, ಟಿಂಬರ್ ವ್ಯಾಪಾರಸ್ಥರು ಖಾಸಗೀ ರೈತರ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.20 ಕಿ.ಮೀ. ದೂರದವರೆಗೆ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಲು ಅಡ್ಡಿಪಡಿಸಿರಲಿಲ್ಲ. ಆದರೀಗ ಲಾರಿ ಮಾಲೀಕರು ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಿ ಟ್ರ್ಯಾಕ್ಟರ್‌ಗಳಲ್ಲಿ ಟಿಂಬರ್ ಸಾಗಿಸದಂತೆ ತಡೆಯಬೇಕು ಒತ್ತಾಯಿಸಿದ್ದು, ಇದಕ್ಕೆ ಪೊಲೀಸ್ ಹಾಗೂ ಆರ್‌ಟಿಓ ಇಲಾಖೆ ಟ್ರ್ಯಾಕ್ಟರ್‌ಗಳನ್ನು ತಡೆದು ದಂಡ ವಿಧಿಸಿದ್ದು ಇದು ಟ್ರ್ಯಾಕ್ಟರ್ ಮಾಲೀಕರಿಗೆ ತೀವ್ರ ಹೊರೆಯಾಗುತ್ತಿದೆ ಎಂದರು.ಟ್ರ್ಯಾಕ್ಟರ್‌ಗಳಲ್ಲೇ ಟಿಂಬರ್ ಸಾಗಿಸಬಾರದೆಂದರೆ ತೋಟದ ಹಾಗೂ ಟಿಂಬರ್ ಮಾಲೀಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಹಿಂದಿನಂತೆ 20 ಕಿ.ಮೀ.ವರೆಗೆ ನಿಗದಿತ ಭಾರದ ಟಿಂಬರ್ ಸಾಗಿಸಲು ಅಡ್ಡಿಪಡಿಸದಂತೆ ಆರ್‌ಟಿಓ ಇಲಾಖೆ ಅಧಿಕಾರಿಗಳು ಟ್ರ್ಯಾಕ್ಟರ್ ಮಾಲೀಕರಿಗೆ ತೊಂದರೆ ನೀಡದಂತೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಕುಮಾರಸ್ವಾಮಿ, ದೇವರಾಜು, ಮುಖಂಡರುಗಳಾದ ರಾಜು, ಯುವರಾಜ್, ಮುರಳೀಧರ್, ಆನಂದ್ ಕುಮಾರ್, ಸೋಮಣ್ಣ, ಲಕ್ಕೇಗೌಡ, ಟ್ರ್ಯಾಕ್ಟರ್ ಮಾಲೀಕರು, ಕಾಫಿ ಬೆಳೆಗಾರರು ಹಾಜರಿದ್ದರು. 18 ಕೆಸಿಕೆಎಂ 3ಕಾಫಿ ತೋಟಗಳಲ್ಲಿ ಟಿಂಬರ್ ಸಾಗಿಸಲು ಟ್ರ್ಯಾಕ್ಟರ್‌ಗಳಿಗೆ ಆರ್‌ಟಿಓ ಇಲಾಖೆ ಅಡ್ಡಿಪಡದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಮುಖಂಡರು ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.