ಸಾರಾಂಶ
ಹರಿಯಾಣದ ಶಂಭು ಗಡಿಯಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ಶೀಘ್ರವೇ ಎಲ್ಲ ಒತ್ತಾಯಗಳನ್ನು ಈಡೇರಿಸಬೇಕು. ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಜಗತ್ ಸಿಂಗ್ ದಲ್ಲೈವಾಲ ಅವರನ್ನು ರಕ್ಷಿಸಬೇಕು ಎಂದು ರಾಜ್ಯ ಸಂಘ ಹಾಗೂ ಹಸಿರು ಸೇನೆ ಡಿಸಿ ಮುಖೇನ ಪ್ರಧಾನಿಗೆ ಮನವಿ ಸಲ್ಲಿಸಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ ಹರಿಯಾಣದ ಶಂಭು ಗಡಿಯಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ಶೀಘ್ರವೇ ಎಲ್ಲ ಒತ್ತಾಯಗಳನ್ನು ಈಡೇರಿಸಬೇಕು. ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಜಗತ್ ಸಿಂಗ್ ದಲ್ಲೈವಾಲ ಅವರನ್ನು ರಕ್ಷಿಸಬೇಕು ಎಂದು ರಾಜ್ಯ ಸಂಘ ಹಾಗೂ ಹಸಿರು ಸೇನೆ ಡಿಸಿ ಮುಖೇನ ಪ್ರಧಾನಿಗೆ ಮನವಿ ಸಲ್ಲಿಸಿದೆ.
ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಈ ಸಂದರ್ಭ ಮಾತನಾಡಿ, ಹರಿಯಾಣ ರೈತರ ಚಳವಳಿ ಅವರಿಗೆ ಮಾತ್ರವೇ ಸೀಮಿತವಲ್ಲ. ಅದು ಭಾರತದ ಎಲ್ಲ ರೈತರ ಪರವಾಗಿ ನಡೆಯುತ್ತಿರುವ ಹೋರಾಟ. 3 ವರ್ಷಗಳ ಹಿಂದೆ ದೆಹಲಿಯಲ್ಲಿ 13 ತಿಂಗಳ ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ರೈತವಿರೋಧಿ ತಿದ್ದುಪಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿತು. ಆ ಸಂದರ್ಭದಲ್ಲಿ ಲಿಖಿತ ಭರವಸೆ ನೀಡಿದ್ದ ಎಂಎಸ್‌ಪಿ ಕಾನೂನುಬದ್ಧ ಮಾಡುವುದು, ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲ ಎಂದು ಹೇಳಿದ್ದು, ಇದುವರೆಗೆ ಈಡೇರಿಸಿಲ್ಲ. ರೈತ ಚಳವಳಿ ಗಂಭೀರ ಪರಿಗಣಿಸಿ, ಸ್ಪಂದಿಸದಿದ್ದರೆ ದೇಶಾದ್ಯಂತ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.ಮನವಿ ಸಲ್ಲಿಸುವ ವೇಳೆ ಜಿಲ್ಲಾಧ್ಯಕ್ಷ ಪಿ.ಪಿ.ಮರುಳಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಗೋಶಾಲೆ ಬಸವರಾಜ್, ಸಂಘಟನಾ ಕಾರ್ಯದರ್ಶಿ ನೀತಿಗೆರೆ ಗಣೇಶ್, ಜಿಲ್ಲಾ ಹಸಿರು ಸೇನೆ ಸಂಚಾಲಕ ಎಂ.ಅಭಿಲಾಷ, ಮಲ್ಲೇನಹಳ್ಳಿ ನಾಗರಾಜ, ಮಾಯಕೊಂಡ ಬೀರಪ್ಪ, ಕ್ಯಾತನಹಳ್ಳಿ ನಾಗರಾಜಪ್ಪ, ಕೊಡಿಕೊಪ್ಪ ಶಿವಪ್ಪ, ಷಣ್ಮುಖಪ್ಪ, ನಿಂಗಪ್ಪ ನೀತಿಗೆರೆ ಲಿಂಗೇಶ್, ಕಿರಣ್, ರಂಗಪ್ಪ, ಪದಾಧಿಕಾರಿಗಳು, ರೈತರು ಹಾಜರಿದ್ದರು.
- - - -2ಕೆಡಿವಿಜಿ36, 37.ಜೆಪಿಜಿ:ರೈತರ ಬೇಡಿಕೆ ಈಡೇರಿಸುವಂತೆ ಅಗ್ರಹಿಸಿ ದಾವಣಗೆರೆಯಲ್ಲಿ ರೈತ ಸಂಘ ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.