ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಖಂಡಿಸಿ ರಾಜ್ಯಪಾಲರಿಗೆ ಮನವಿ

| Published : Sep 03 2025, 01:00 AM IST

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಖಂಡಿಸಿ ರಾಜ್ಯಪಾಲರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಹ ವಿಜೇತೆ ಬಾನು ಮುಷ್ತಾಕ್ ರವರಿಂದ ದಸರಾ ಉದ್ಘಾಟಿಸಲು ಸರ್ಕಾರ ಮುಂದಾಗಿರುವುದು ದುರದೃಷ್ಟಕರ. ಕನ್ನಡ ಭುವನೇಶ್ವರಿ ಮೇಲೆ ನಂಬಿಕೆ ಇಲ್ಲದ ಅನಾಸ್ತಿಕರಾಗಿರುವ ಬಾನು ಮುಷ್ತಾಕ್ ಅವರು ಕನ್ನಡ ಭುವನೇಶ್ವರಿ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. ರಾಜ್ಯದ ಕನ್ನಡಾಭಿಮಾನಿಗಳಿಗೆ ಬೇಸರ ಉಂಟಾಗಿದೆ. ಆದ್ದರಿಂದ ಅವರಿಂದ ದಸರಾ ಉದ್ಘಾಟಿಸಬಾರದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕನ್ನಡ ಭುವನೇಶ್ವರಿಯನ್ನು ವಿರೋಧಿಸಿರುವ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆ ಸರ್ಕಾರ ಆಯ್ಕೆ ಮಾಡಿರುವುದನ್ನು ಖಂಡಿಸಿ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ತಾಲೂಕು ಆಡಳಿದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವೇದಿಕೆ ಜಿಲ್ಲಾ ಸಂಚಾಲಕ ಚಂದನ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ತಕ್ಷಣ ಕನ್ನಡ ಭುವನೇಶ್ವರಿ ವಿರೋಧಿ ಬಾನು ಮುಷ್ತಾಕ್‌ರನ್ನು ಉದ್ಘಾಟನಾ ಕಾರ್ಯಕ್ರಮದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ದಸರಾ ಹಬ್ಬ ಸುಮಾರು 415 ವರ್ಷಗಳಿಂದ ಮೈಸೂರು ಮಹಾರಾಜ ಸಂಸ್ಥಾನದಿಂದ, ರಾಜ ಮಹಾರಾಜರು ಮತ್ತು ಅವರ ಕುಟುಂಬ ವರ್ಗದವರು ಹಿಂದೂ ಸಂಪ್ರದಾಯದಂತೆ ವಿಜೃಂಭಣೆಯಿಂದ ಆದಿದೇವತೆ ತಾಯಿ ಶ್ರೀಚಾಮುಂಡೇಶ್ವರಿಯಲ್ಲಿ ನಂಬಿಕೆ ಇಟ್ಟು ಆಚರಿಸುತ್ತಾ ಬಂದಿದ್ದಾರೆ ಎಂದರು.

ಬದಲಾದ ವ್ಯವಸ್ಥೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಸಹ ಸಂವಿಧಾನದ ಆಧಾರದ ಮೇರೆಗೆ ಬಹುಸಂಖ್ಯಾತರ, ಶ್ರದ್ಧೆ ಮತ್ತು ನಂಬಿಕೆಗಳ ಪ್ರಕಾರ, ಸಂಪ್ರದಾಯವಾಗಿ ಶ್ರೀಚಾಮುಂಡೇಶ್ವರಿ ಮತ್ತು ಕನ್ನಡ ಭುವನೇಶ್ವರಿ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿಗಳಿಂದ ಮೈಸೂರು ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಈವರೆಗೂ ನೆರವೇರಿಸಿಕೊಂಡು ಬಂದಿದೆ ಎಂದರು.

ಆದರೆ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಹ ವಿಜೇತೆ ಬಾನು ಮುಷ್ತಾಕ್ ರವರಿಂದ ದಸರಾ ಉದ್ಘಾಟಿಸಲು ಸರ್ಕಾರ ಮುಂದಾಗಿರುವುದು ದುರದೃಷ್ಟಕರ. ಕನ್ನಡ ಭುವನೇಶ್ವರಿ ಮೇಲೆ ನಂಬಿಕೆ ಇಲ್ಲದ ಅನಾಸ್ತಿಕರಾಗಿರುವ ಬಾನು ಮುಷ್ತಾಕ್ ಅವರು ಕನ್ನಡ ಭುವನೇಶ್ವರಿ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. ರಾಜ್ಯದ ಕನ್ನಡಾಭಿಮಾನಿಗಳಿಗೆ ಬೇಸರ ಉಂಟಾಗಿದೆ. ಆದ್ದರಿಂದ ಅವರಿಂದ ದಸರಾ ಉದ್ಘಾಟಿಸಬಾರದು ಎಂದು ಆಗ್ರಹಿಸಿದರು.

ಈ ವೇಳೆ ಮಾನವ ಹಕ್ಕು ಆಯೋಗ ರಾಜ್ಯ ಸದಸ್ಯ ಬಾಲ್ ರಾಜ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದಗಾಲು ಶಂಕರ್, ವೇದಿಕೆ ಕಾರ್ಯಕರ್ತರಾದ ಪಿ ರಾಘು, ಶಿವು, ಪ್ರೇಮ್, ನಯನ್, ಗಿರೀಶ್ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.