ಸಾರಾಂಶ
ತಾಲೂಕು ಸುಗ್ರಾಮ ಒಕ್ಕೂಟ ಅಧ್ಯಕ್ಷೆ ಪುಷ್ಪಾ
ಕನ್ನಡಪ್ರಭ ವಾರ್ತೆ, ತರೀಕೆರೆಅಧಿಕಾರದ ಅವಧಿ ಪೂರ್ಣ ಆಗುವುದರೊಳಗೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಡೆಸಬೇಕೆಂದು ಸುಗ್ರಾಮ ಒಕ್ಕೂಟ ಅಧ್ಯಕ್ಷೆ ಪುಷ್ಪಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬುಧವಾರ ಬೇಲೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಜಿಲ್ಲಾ ಸುಗ್ರಾಮ ಒಕ್ಕೂಟ ಜಿಲ್ಲಾಧ್ಯಕ್ಷೆ ಸುಧಾ ಅವರ ಮನೆಯಲ್ಲಿ ಸುಗ್ರಾಮ ಪ್ರತಿನಿಧಿಗಳು ಮತ್ತು ಮಹಿಳೆಯರ ಜಾಗೃತಿ ವೇದಿಕೆ ಸಭೆಯಲ್ಲಿ ಮಾತನಾಡಿ 2026 ಜನವರಿಗೆ ನಮ್ಮ ಅವಧಿ ಪೂರ್ಣಗೊಳ್ಳುತ್ತದೆ. ಈ ಜನವರಿ ಒಳಗೆ ಗ್ರಾಪಂ ಚುನಾವಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಚುನಾವಣೆ ಮುಂದೂಡಿ ಸ್ಥಳೀಯ ಅಧಿಕಾರ ಮೊಟುಕುಗೊಳಿಸಬಾರದು. ಹಳ್ಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಅನೇಕ ಊಹಾಪೋಹಗಳಿಗೆ ಸರ್ಕಾರ ಆಸ್ಪದ ಕೊಡಬಾರದು. ಗ್ರಾಪಂ ಅವಧಿ ಮುಗಿಯುವಒಳಗೆ ಸ್ಥಳೀಯ ಸರ್ಕಾರಗಳಿಗೆ ಚುನಾವಣೆ ನಡೆಸಬೇಕು. ಅದರಂತೆ ಹೊಸ ಕಮಿಟಿ ರಚಿಸುವಂತೆ ಮನವಿ ಮಾಡಿದರು.ಸುಗ್ರಾಮ ಜಿಲ್ಲಾಧ್ಯಕ್ಷೆ ಸುಧಾ ಮಾತನಾಡಿ ನಮ್ಮ ಅವಧಿ ಮುಗಿಯುವುದರೊಳಗೆ ಗ್ರಾಪಂ ಚುನಾವಣೆ ನಡೆಸಿ ಕಮಿಟಿ ಯನ್ನು ಅಧಿಕಾರಕ್ಕೆ ತರಬೇಕು. ಆ ಮೂಲಕ ಸ್ಥಳೀಯ ಸರ್ಕಾರವನ್ನು ಉಳಿಸಿ ಬೆಳೆಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.ಜಿಲ್ಲಾ ಸುಗ್ರಾಮ ಒಕ್ಕೂಟದ ಪ್ರತಿನಿಧಿ ಶ್ರೀನಿವಾಸ್ ಮಾತನಾಡಿ ಈ ಬಾರಿ ಗ್ರಾಪಂಗಳಲ್ಲಿ ಅಧಿಕಾರದ ಅವಧಿ ಮುಗಿಯು ತ್ತಿದ್ದಂತೆ ಅನೇಕರು ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊಂದಿದ್ದಾರೆ. ಈ ದಿನದಿಂದಲೇ ಈಗಿರುವ ಅನುಭವಿ ಮಹಿಳಾ ಸದಸ್ಯರು ತಯಾರಿ ಮಾಡಿಕೊಂಡಿದ್ದಾರೆ. ಪಂಚಾಯತಿ ಬಗ್ಗೆ ಒಂದಿಷ್ಟು ಮಾಹಿತಿ ಸಹ ತಿಳಿದು ಮುಂದಿನ ಚುನಾವಣೆಯಲ್ಲಿ ನಿಂತು ಗೆಲ್ಲಬೇಕೆಂಬ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರ ಹಿಡಿದು ಉತ್ತಮ ಆಡಳಿತ ಕೊಡುವಲ್ಲಿ ಹೆಣ್ಣುಮಕ್ಕಳು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.
ಅಜ್ಜಂಪುರ ತಾಲೂಕು ಸುಗ್ರಾಮ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಸರ್ಕಾರ ತಡಮಾಡದೆ ಚುನಾವಣೆ ನಡೆಸಬೇಕು. ಗ್ರಾಮ ಪಂಚಾಯಿತಿ ಚುನಾವಣೆ 2026 ಜನವರಿಗೆ ಮುಗಿಯುತ್ತದೆ. ನಮ್ಮ ಅಧಿಕಾರದ ಅವಧಿ ಮುಗಿಯು ತ್ತಿದ್ದಂತೆ ಚುನಾವಣೆ ನಡೆಸಲಿ ಎಂದರು. ಸುಗ್ರಾಮ ಒಕ್ಕೂಟದ ಉಪಾಧ್ಯಕ್ಷೆ ಶಕುಂತಲ, ಪದಾಧಿಕಾರಿಗಳಾದ ರೇಖಾ, ಅಲುಮೇಲು ಮತಿತರರು ಭಾಗವಹಿಸಿದ್ದರು.-3ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಸುಗ್ರಾಮ ಒಕ್ಕೂಟ ಸಭಯಲ್ಲಿ ತಾಲೂಕು ಸುಗ್ರಾಮ ಒಕ್ಕೂಟದ ಅಧ್ಯಕ್ಷೆ ಪುಷ್ಪ ಮಾತನಾಡಿದರು. ಜಿಲ್ಲಾ ಸುಗ್ರಾಮ ಒಕ್ಕೂಟ ಜಿಲ್ಲಾಧ್ಯಕ್ಷೆ ಸುಧಾ ಮತ್ತಿತರರು ಇದ್ದರು.