ನಾಗಲಮಡಿಕೆ ಅಭಿವೃದ್ಧಿಗೆ ಸಚಿವರಿಗೆ ಮನವಿ

| Published : Jul 26 2025, 12:00 AM IST

ನಾಗಲಮಡಿಕೆ ಅಭಿವೃದ್ಧಿಗೆ ಸಚಿವರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ಹಿನ್ನಲೆಯ ತಾಲೂಕಿನ ನಾಗಲಮಡಿಕೆ ಗ್ರಾಮದ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಪ್ರಗತಿ ಹಾಗೂ ವ್ಯವಸ್ಥಾಪನ ಸಮಿತಿ ರಚನೆಗೆ ಅನುಮೋದನೆ ನೀಡುವಂತೆ ಕೋರಿ ಶುಕ್ರವಾರ ರಾಜ್ಯ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗರೆಡ್ಡಿ ಅವರಿಗೆ ಶಾಸಕ ಎಚ್‌.ವಿ.ವೆಂಕಟೇಶ್‌ ಮನವಿ ಸಲ್ಲಿಸಿ ಒಪ್ಪಿಗೆ ಪಡೆದರು.

ಕನ್ನಡಪ್ರಭವಾರ್ತೆ ಪಾವಗಡ

ಪಾವಗಡ ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಅಂತ್ಯ ಸುಬ್ರಮಣ್ಯಸ್ವಾಮಿ ಎಂದೇ ಖ್ಯಾತಿ ಪಡೆದಿದೆ. ಸುಬ್ರಮಣ್ಯಸ್ವಾಮಿ ದೇವಸ್ಥಾನ ಹಳೇಯದಾಗಿದ್ದ ಕಾರಣ ಭಕ್ತರ ಒತ್ತಾಸೆ, ಇಲ್ಲಿನ ದೇವಸ್ಥಾನವನ್ನು ಕುಕ್ಕೆ ಸುಬ್ರಮಣ್ಯಸ್ವಾಮಿ ಮಾದರಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲು ಮುಂದಾಗಿದ್ದು, . ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ರಾಜ್ಯ ಮುಜರಾಯಿ ಇಲಾಖೆಯ ಅಧಿಕಾರಿಗಳ ಜತೆ ದೇವಸ್ಥಾನದ ಪರಿಶೀಲನೆ ಕಾರ್ಯ ನಡೆಸಿದ್ದು ಇದಕ್ಕೆ ಮುಜಾರಾಯಿ ಇಲಾಖೆ ಸಹಮತ ಸೂಚಿಸಿದೆ. ಈ ಸಂಬಂಧ ರಾಜ್ಯ ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗರೆಡ್ಡಿ ಅವರನ್ನು ಭೇಟಿ ಮಾಡಿ, ನವೀನ ಮಾದರಿಯಲ್ಲಿ ಇಲ್ಲಿನ ನಾಗಲಮಡಿಕೆ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಪ್ರಗತಿಗೆ ಗುದ್ದಲಿಪೂಜೆ ಹಾಗೂ ಇತರೆ ಕಾರ್ಯಕ್ರಮದ ನಿರ್ವಹಣೆಗೆ ವ್ಯವಸ್ಥಾಪನ ಸಮಿತಿಗೆ ಅನುಮೋದನೆ ನೀಡುವಂತೆ ಸಚಿವರಲ್ಲಿ ಮನವಿ ಮಾಡಿ ಒಪ್ಪಿಗೆ ಪಡೆದಿರುವುದಾಗಿ ಶಾಸಕರು ತಿಳಿಸಿದ್ದಾರೆ.