ಸಾರಾಂಶ
ಮದ್ದೂರು ನಗರಸಭೆಯಿಂದ ರೈಲು ನಿಲ್ದಾಣದ ರಸ್ತೆಗೆ ತಿರುಮಲೇಗೌಡ ರಸ್ತೆ ಎಂದು ನಾಮಕರಣ ಮಾಡುವ ಜೊತೆಗೆ ಆರ್ಯ ಈಡಿಗರ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಅಗತ್ಯ ನಿವೇಶನ ಮಂಜೂರು ಮಾಡಿಸಿಕೊಡುವಂತೆ ಸಂಘದ ಸದಸ್ಯರ ನಿಯೋಗದಿಂದ ಶಾಸಕರಿಗೆ ಮನವಿ.
ಮದ್ದೂರು:
ಪಟ್ಟಣದ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಪಕ್ಕದ ರೈಲು ನಿಲ್ದಾಣ ರಸ್ತೆಗೆ ಕೀರ್ತಿ ಶೇಷರಾದ ತಿರುಮಲೇಗೌಡರ ರಸ್ತೆ ಎಂದು ನಾಮಕರಣ ಮಾಡುವಂತೆ ತಾಲೂಕು ಆರ್ಯ ಈಡಿಗರ ಸಂಘ ಶಾಸಕ ಕೆ.ಎಂ.ಉದಯ್ ಅವರಿಗೆ ಮನವಿ ಮಾಡಿದೆ.ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಹಾಗೂ ಗೌರವಾಧ್ಯಕ್ಷ ಎಸ್.ಎಲ್.ತಮ್ಮಯ್ಯ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳ ನಿಯೋಗ ಶಾಸಕರನ್ನು ಭೇಟಿ ಮಾಡಿ, ಧ್ವಜ ಸತ್ಯಾಗ್ರಹ ಸೌಧದ ಸ್ಥಳದಲ್ಲಿ ನಡೆದ ಸ್ವಾತಂತ್ರ್ಯ ಸೇನಾನಿಗಳ ಹೋರಾಟದ ವೇಳೆ ತಿರುಮಲೇಗೌಡರು ತಮ್ಮ ಜಮೀನನ್ನು ನೀಡಿ ಹೋರಾಟಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ನಗರಸಭೆಯಿಂದ ರೈಲು ನಿಲ್ದಾಣದ ರಸ್ತೆಗೆ ತಿರುಮಲೇಗೌಡ ರಸ್ತೆ ಎಂದು ನಾಮಕರಣ ಮಾಡುವ ಜೊತೆಗೆ ಆರ್ಯ ಈಡಿಗರ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಅಗತ್ಯ ನಿವೇಶನ ಮಂಜೂರು ಮಾಡಿಸಿಕೊಡುವಂತೆ ಸಂಘದ ಸದಸ್ಯರ ನಿಯೋಗ ಮನವಿ ಪತ್ರದ ಮೂಲಕ ಆಗ್ರಹಿಸಿದೆ. ಈ ವೇಳೆ ಸಂಘದ ಉಪಾಧ್ಯಕ್ಷರಾದ ಓಬಳರಂಗ, ವಿ.ಎಚ್. ನಾರಾಯಣಸ್ವಾಮಿ, ಎಸ್. ಶ್ರೀನಿವಾಸ್, ಮತ್ತು ಪದಾಧಿಕಾರಿಗಳು ಇದ್ದರು.ಹಾಡ್ಲಿ ವ್ಯಾಪ್ತಿ ಇಂದು ವಿದ್ಯುತ್ ವ್ಯತ್ಯಯ
ಹಲಗೂರು: ಸಮೀಪದ ಹಾಡ್ಲಿ ಬಳಿ ಇರುವ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅ.15 ರಂದು ಬುಧವಾರ ಲೈನ್ ಕಾಮಗಾರಿ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಹಾಡ್ಲಿ, ಅಗಸನಪುರ, ಜೋಗಿಪುರ, ಮೇಗಳಾಪುರ, ಕಂಸಾಗರ, ಲಿಂಗಣಾಪುರ, ನಡಕಲಪುರ, ನಂಜೇಗೌಡನದೊಡ್ಡಿ, ಗ್ರಾಮದೇವತೆ ಪುರ, ಕೋಡಿಪುರ, ಹುಲ್ಲಹಳ್ಳಿ, ಹುಲ್ಲಾಗಾಲ, ಚೆನ್ನೀಪುರ, ಬಸವನಪುರ, ಡಿ.ಹಲಸಹಳ್ಳಿ, ಧನಗೂರು, ಕೂನನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿವಿಧ ಗ್ರಾಮಗಳಲ್ಲಿ ಇಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಮಳವಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.