ಕೆಜಿಎಫ್ ಉಳಿಸಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ

| Published : Dec 17 2024, 12:45 AM IST

ಸಾರಾಂಶ

ಕೆಜಿಎಫ್‌ ಚಿನ್ನದ ಗಣಿಗಳನ್ನು ಮುಚ್ಚಿದ ನಂತರ ಕಾರ್ಮಿಕರು ಮಕ್ಕಳಿಗೆ ಸ್ಥಳೀಯವಾಗಿ ಉದ್ಯೋಗವಿಲ್ಲದೆ ಪ್ರತಿ ದಿನ ಬೆಂಗಳೂರು ನಗರಕ್ಕೆ ಹೋಗಿ ಬರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ತಾಲೂಕಿನ ಜಲ್ವಂತ ಸಮಸ್ಯೆಗಳಿಗೆ ಕೆಜಿಎಫ್ ಉಳಿಸಿ ಹೋರಾಟಕ್ಕೆ ಎಲ್ಲ ಪಕ್ಷಗಳ ಮುಖಂಡರ ಬೆಂಬಲ ಅಗತ್ಯ ಎಂದು ಸಮಾಜ ಸೇವಕ ಮೋಹನ್‌ಕೃಷ್ಣ ತಿಳಿಸಿದರು.ನಗರದ ಕಿಂಗ್ ಜಾರ್ಜ್ ಹಾಲಿನಲ್ಲಿ ಕೆಜಿಎಫ್ ಉಳಿಸಿ ಸಂಘಟನೆಯ ಪೂರ್ವಬಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಮಾತನಾಡಿದ್ದಾರೆ, ಕಾಂಗ್ರೆಸ್ ಸದಸ್ಯರಾದ ವಳ್ಳಲ್ ಮುನಿಸ್ವಾಮಿ ನಗರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿರುವುದು ಶ್ಲಾಘನೀಯ ಎಂದರು.ಕೆಜಿಎಫ್ ಉಳಿಸಿ ಹೋರಾಟಚಿನ್ನದ ಗಣಿಗಳನ್ನು ಮುಚ್ಚಿದ ನಂತರ ಕಾರ್ಮಿಕರು ಮಕ್ಕಳಿಗೆ ಸ್ಥಳೀಯವಾಗಿ ಉದ್ಯೋಗವಿಲ್ಲದೆ ಪ್ರತಿ ದಿನ ಬೆಂಗಳೂರು ನಗರಕ್ಕೆ ಹೋಗಿ ಬರುತ್ತಿದ್ದಾರೆ, ಸ್ಥಳೀಯವಾಗಿ ಕಾರ್ಖಾನೆಗಳು ಬರಬೇಕಾದರೆ ಕೆಜಿಎಫ್ ಉಳಿಸಿ ಸಂಘಟನೆ ಪಾತ್ರ ಬಹಳ ಮುಖ್ಯ. ಚಿನ್ನದ ಗಣಿಗಳ ಪ್ರದೇಶದ ೧೩ ಸಾವಿರ ಎಕರೆ ಭೂಮಿಯಿದ್ದು, ನಗರದಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲು ಬರುವ ಉದ್ಯಮಿಗಳಿಗೆ ಉಚಿತವಾಗಿ ಭೂಮಿಯನ್ನು ನೀಡಬೇಕೆಂದು ಸರಕಾರಕ್ಕೆ ಕೆಜಿಎಫ್ ಉಳಿಸಿ ಸಂಘಟನೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಅ‍ರು ಹೇಳಿದರು.

ಕಾಂಗ್ರೆಸ್ ನಗರಸಭೆ ಸದಸ್ಯ ಜಯಪಾಲ್ ಮಾತನಾಡಿ, ಕೆಜಿಎಫ್‌ನಲ್ಲಿ ಸಾರ್ವಜನಿಕ ಆಸ್ಪತ್ರೆ ಇದೆ, ಆದರೆ ವೈದ್ಯರು ಇಲ್ಲ, ಅಗತ್ಯವಿರುವ ದಾದಿಯರು ಇಲ್ಲ, ರೋಗಿಗಳಿಗೆ ಬೇಕಾಗಿರುವ ಔಷಿದಿಗಳು ಇಲ್ಲ, ಆಸ್ಪತ್ರೆಯ ಕಟ್ಟಡ ಮಾತ್ರ ಇದ್ದು ಏನು ಪ್ರಯೋಜನ ಎಂದರು.ಅಧಿಕಾರಿಗಳು ಇಲ್ಲೇ ವಾಸಿಸಬೇಕುಕಾಂಗ್ರೆಸ್ ಮುಖಂಡ ಶೇಷಬಾಬು ಮಾತನಾಡಿ, ಕೆಜಿಎಫ್ ತಾಲೂಕಿನಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆ ಲಭ್ಯವಾಗಬೇಕಾದರೆ ಗ್ರೀನ್ ಪೆನ್ ಅಧಿಕಾರಿಗಳು ಸ್ಥಳೀಯವಾಗಿ ವಾಸ ಮಾಡಬೇಕು, ಬಹುತೇಕ ಅಧಿಕಾರಿಗಳು ಬೆಂಗಳೂರು, ಕೋಲಾರ ಜಿಲ್ಲೆಯ ಇತರೆ ಭಾಗಗಳಿಂದ ಬೆಳಗ್ಗೆ ೧೧ ಗಂಟೆ ಬಂದು ಸಂಜೆ ೪ ಗಂಟೆಗೆ ಹೋಗುತ್ತಾರೆ. ಗ್ರೀನ್ ಪೆನ್ ಅಧಿಕಾರಿಗಗಳು ಕೆಜಿಎಫ್ ನಗರದಲ್ಲಿ ವಾಸ ಮಾಡದಿರುವುದು ಇಲ್ಲಿಯ ಜನರ ದುರಾದೃಷ್ಟಕರ ಎಂದರು.ಸಿಪಿಐ ಮುಖಂಡ ಜ್ಯೋತಿಬಸು ಮಾತನಾಡಿ, ಕೆಜಿಎಫ್ ತಾಲೂಕಿನ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಕಾಲ ಕಾಲಕ್ಕೆ ಮಾಡಿಕೊಡಬೇಕು, ಕೆಜಿಎಫ್ ನಗರದ ಜನರಿಗೆ ಕುಡಿವ ನೀರು, ರಸ್ತೆ, ಬೀದಿ ದೀಪಗಳಂತಹ ಸಮಸ್ಯೆಗಳು ಕಾಡುತ್ತಿದ್ದು, ಕೆಜಿಎಫ್ ಉಳಿಸಿ ಸಂಘಟನೆ ಬಲಪಡಿಸಿ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಿ ಕೆಜಿಎಫ್ ಜನತೆಗೆ ನ್ಯಾಯ ಸಿಗುವಂತೆ ಕೆಜಿಎಫ್ ಉಳಿಸಿ ಸಂಘಟನೆ ಕಾರ್‍ಯನಿರ್ವಹಿಸಲಿದೆ ಎಂದರು.ಸಭೆಯಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಕೆ.ಸಿ.ಮುರಳಿ, ಸೆಂಗುಟ್ಟೋವನ್, ಕೆ.ರಾಜೇಂದ್ರನ್, ವಿ.ಶಂಕರ್ ಇದ್ದರು.

೧೬ಕೆಜಿಎಫ್೧.........ಕೆಜಿಎಫ್‌ನ ಕಿಂಗ್ ಜಾರ್ಜ್ ಹಾಲಿನಲ್ಲಿ ಹಮ್ಮಿಕೊಂಡಿದ್ದ ಕೆಜಿಎಫ್ ಉಳಿಸಿ ಸಂಘಟನೆ ಪೂರ್ವಭಾವಿ ಸಭೆಯಲ್ಲಿ ಸಮಾಜ ಸೇವಕ ಮೋಹನ್ ಕೃಷ್ಣ ಮಾತನಾಡಿದರು.