ಸಾರಾಂಶ
ಕೊಪ್ಪ: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಹಿರಿಯ ವೈದ್ಯ ಡಾ. ಬಿ.ಎಸ್ ವೆಂಕಟೇಶ್ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಕೊಪ್ಪ ಘಟಕದಿಂದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕೊಪ್ಪ ತಹಸೀಲ್ದಾರ್‌ಗೆ ಬುಧವಾರ ಮನವಿ ಸಲ್ಲಿಸಲಾಯಿತು. ಡಾ. ಬಿ.ಎಸ್ ವೆಂಕಟೇಶ್ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ರೋಗಿಗಳಾದ ತಸ್ಲೀಮ್, ಇರ್ಫಾನ್ ಹಾಗೂ ಅವರ ಸಂಬಂಧಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದನ್ನು ಭಾರತೀಯ ವೈದ್ಯಕೀಯ ಸಂಘ ಕೊಪ್ಪ ಶಾಖೆ, ಕರ್ನಾಟಕ ಸರ್ಕಾರಿ ಕರ್ತವ್ಯ ನಿರತ ವೈದ್ಯರ ಸಂಘ, ಆಯುಷ್ ಫೆಡರೇಷನ್ ಚಿಕ್ಕಮಗಳೂರು ಇವುಗಳ ಎಲ್ಲಾ ಸದಸ್ಯರು ಖಂಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಪೋಲಿಸ್ ನಿರೀಕ್ಷಕರು ಆರೋಪಿಗಳನ್ನು ಬಂಧಿಸಿ, ಎಫ್‌ಐಆರ್ ದಾಖಲಿ ಸಿರುವುದು ಸೂಕ್ತ. ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ, ವೈದ್ಯರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಆರೋಪಿಗಳಿಗೆ ಜಾಮೀನು ರಹಿತ ಶಿಕ್ಷೆಯಾಗಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಭಾರತೀಯ ವೈದ್ಯಕೀಯ ಸಂಘದ ಕೊಪ್ಪ ತಾಲೂಕು ಅಧ್ಯಕ್ಷೆ ಅನಿತಾ ಎನ್. ರಾವ್, ವಿಭಾ ಹೇಮಂತ್, ಡಾ. ಅಮರ್ ಶೇಖರ್, ಡಾ. ಸಾನಿಯ ಶಬಾಹಿ, ಡಾ. ಶಾನುಭೋಗ್, ಡಾ. ಉದಯ್ ಶಂಕರ್, ಡಾ. ನಟರಾಜ್, ಡಾ. ಹರ್ಷ, ಡಾ. ಹೇಮಂತ್ ಕುಮಾರ್ ಮುಂತಾದವರಿದ್ದರು.