ಬೇಲೂರು ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಭೆಗೆ ಮನವಿ

| Published : Apr 23 2025, 12:33 AM IST

ಸಾರಾಂಶ

ಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗದ ಹಿನ್ನೆಲೆ ಹಾಗೂ ಸಣ್ಣಪುಟ್ಟ ವೈಮನಸ್ಸಿನಿಂದಾಗಿ ಪಕ್ಷಕ್ಕೆ ಮುಜುಗರ ತಂದಿದ್ದು, ಕಮಲ ಪಕ್ಷದ ವರಿಷ್ಠರ ತೀರ್ಮಾನದಂತೆ ಎಲ್ಲಾ ಸದಸ್ಯರ ಒಮ್ಮತ ಸಂಗ್ರಹಿಸಲು ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಕೂಡಲೇ ಸಭೆ ಕರೆಯುವಂತೆ ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿ ಸುಜಯ್ ಅವರಿಗೆ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರಾದ ಬಿ ಶಾಂತಕುಮಾರ್, ಬಿ ಗಿರೀಶ್, ಸಿ ಎನ್ ದಾನಿ ಹಾಗೂ ಅಕ್ರಂ ಪಾಷ ಮನವಿ ಪತ್ರ ಸಲ್ಲಿಸಿದ್ದಾರೆ‌.

ಕನ್ನಡಪ್ರಭ ವಾರ್ತೆ ಬೇಲೂರು

ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಭೆ ಕರೆಯಲು ಸದಸ್ಯರಿಂದ ಮನವಿ ಮಾಡಲಾಯಿತು.

ಪಟ್ಟಣದ ಪುರಸಭೆಯಲ್ಲಿ ಈಗಾಗಲೆ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದು ಮೊದಲ ಅವಧಿಯಲ್ಲಿ ದಾನಿ ತೀರ್ಥಕುಮಾರಿ ವೆಂಕಟೇಶ್ ಹಾಗೂ ಮೀನಾಕ್ಷಿ ಅದರ ನಂತರ ಮೀಸಲಾತಿಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ನಿಗದಿಯಾದ ಹಿನ್ನೆಲೆಯಲ್ಲಿ ಎ.ಆರ್. ಅಶೋಕ್ ಅಧ್ಯಕ್ಷರಾಗಿದ್ದರು.

ಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗದ ಹಿನ್ನೆಲೆ ಹಾಗೂ ಸಣ್ಣಪುಟ್ಟ ವೈಮನಸ್ಸಿನಿಂದಾಗಿ ಪಕ್ಷಕ್ಕೆ ಮುಜುಗರ ತಂದಿದ್ದು, ಕಮಲ ಪಕ್ಷದ ವರಿಷ್ಠರ ತೀರ್ಮಾನದಂತೆ ಎಲ್ಲಾ ಸದಸ್ಯರ ಒಮ್ಮತ ಸಂಗ್ರಹಿಸಲು ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಕೂಡಲೇ ಸಭೆ ಕರೆಯುವಂತೆ ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿ ಸುಜಯ್ ಅವರಿಗೆ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರಾದ ಬಿ ಶಾಂತಕುಮಾರ್, ಬಿ ಗಿರೀಶ್, ಸಿ ಎನ್ ದಾನಿ ಹಾಗೂ ಅಕ್ರಂ ಪಾಷ ಮನವಿ ಪತ್ರ ಸಲ್ಲಿಸಿದ್ದಾರೆ‌.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಜಿ ಶಾಂತಕುಮಾರ್ ಹಾಗೂ ಬಿ ಗಿರೀಶ್ ಮಾತನಾಡಿ, ಈ ಹಿಂದೆ ಪಕ್ಷದ ಆಂತರಿಕ ಒಪ್ಪಂದದಂತೆ ಎ ಆರ್‌. ಅಶೋಕ್ ಅವರಿಗೆ ೬ ತಿಂಗಳ ಕಾಲ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಅದರಂತೆ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ವರಿಷ್ಠರು ತಿಳಿಸಿದ್ದರೂ ಸಹ ಆದರೂ ಸಹ ರಾಜೀನಾಮೆ ನೀಡದೆ ಬಹಿರಂಗ ಸಭೆಗಳಲ್ಲಿ ನಾನು ರಾಜೀನಾಮೆ ನೀಡುವುದಿಲ್ಲ, ಒಂದು ವರ್ಷದ ಅವಧಿಯವರೆಗೆ ರಾಜೀನಾಮೆ ನೀಡುವುದಿಲ್ಲ. ಅಲ್ಲದೇ ಇತ್ತೀಚಿಗೆ ಮಾಜಿ ಸಚಿವ ಶಿವರಾಂ ವಿರುದ್ಧ ವರ್ಗಾವಣೆ ದಂಧೆ ಎಂಬ ಆರೋಪ ಮಾಡಿದ್ದಲ್ಲದೆ ಈ ಎಲ್ಲಾ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ೧೭ ಜನ ಕಾಂಗ್ರೆಸ್ ಸದಸ್ಯರಲ್ಲಿ ೯ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಮನವಿ ಮಾಡಿದ್ದೇವೆ ಎಂದರು.

ಮುಖ್ಯಾಧಿಕಾರಿ ಸುಜಯ್ ಮಾತನಾಡಿ, ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮನವಿ ಮಾಡಿದ್ದು, ೧೦ ದಿನಗಳಲ್ಲಿ ಅವಿಶ್ವಾಸ ಸಭೆ ಕರೆಯಲಾಗುವುದು. ಈ ಸಭೆಯನ್ನು ಅಧ್ಯಕ್ಷರೇ ನಡೆಸಬೇಕು ಎಂದು ಮಾಹಿತಿ ತಿಳಿಸಿದರು.