ಸಾರಾಂಶ
ಹಾವೇರಿ: ನೂತನವಾಗಿ ಆರಂಭವಾದ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ಹಾವೇರಿ ವಿವಿ ಅಡಿಯಲ್ಲಿರುವ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯ ಸದಸ್ಯರು, ಡೀನ್ ಸದಸ್ಯರು, ಬಿಒಎಸ್, ಬಿಒಇ ಸದಸ್ಯರು, ಎಲ್ಲ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರ ಪರವಾಗಿ ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕಳೆದ ಎರಡು ವರ್ಷಗಳ ಹಿಂದೆ ಆರಂಭವಾಗಿದ್ದ ಹಾವೇರಿ ವಿಶ್ವವಿದ್ಯಾಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಾತ್ಮಕ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸುತ್ತಿದೆ. ಕಾಲ ಕಾಲಕ್ಕೆ ಸರಿಯಾಗಿ ಪರೀಕ್ಷೆಗಳನ್ನು ನಡೆಸುವ ಮೂಲಕ ಸಕಾಲದಲ್ಲಿ ಫಲಿತಾಂಶ ಪ್ರಕಟಿಸುತ್ತಿದೆ.
ಕ್ರಿಯಾಶೀಲ ಚಟುವಟಿಕೆಗಳಾದ ಕ್ರೀಡೆ, ಎನ್ಎಸ್ಎಸ್ ಮೂಲಕ ವಿದ್ಯಾರ್ಥಿಗಳನ್ನು ಅಧ್ಯಾಪಕರನ್ನು ಕ್ರಿಯಾಶೀಲಗೊಳಿಸುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಒದಗಿಸಲು ತುಂಬಾ ಅನುಕೂಲವಾಗಿದೆ. ಸರ್ಕಾರ ರಾಜ್ಯ ಸಚಿವ ಸಂಪುಟದ ಉಪಸಮಿತಿಯ ನಿರ್ಧಾರದಂತೆ ವಿಶ್ವವಿದ್ಯಾನಿಲಯವನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯಬೇಕು ಹಾಗೂ ಈಗ ಮಂಡಿಸಲಿರುವ ಆಯವ್ಯಯದಲ್ಲಿ ಅಗತ್ಯ ಅನುದಾನ ನೀಡುವ ಮೂಲಕ ಅಭಿವೃದ್ಧಿಪಡಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.ಈ ವೇಳೆ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ, ಡಾ. ಎಸ್.ಪಿ. ಗೌಡರ, ಡಾ. ವಿ.ಎಂ. ಕುಮ್ಮೂರ, ಡಾ. ಎಸ್.ಜಿ. ವೈದ್ಯ, ಪ್ರೊ. ಎಸ್.ಟಿ. ತೆಪ್ಪದ, ಪ್ರೊ. ಆರ್.ಎಫ್. ಅಯ್ಯನಗೌಡ್ರ, ಡಾ. ಸಿ.ಎಸ್. ಕುಮ್ಮೂರ, ಡಾ. ಕೊಟ್ರೇಶ ಬಿ., ಪ್ರೊ. ಟಿ.ಜಿ. ಮಾಳಮ್ಮನವರ, ಪ್ರೊ.ಸಿ.ಎ. ಹರಿಹರ, ಪ್ರೊ.ವಿ.ಕೆ. ಕಾಟೇನಹಳ್ಳಿ, ಡಾ. ಎಸ್.ಬಿ. ಚನ್ನಗೌಡ್ರ, ಪ್ರವೀಣ ಎನ್.ಎ., ರಮೇಶ ಎನ್.ಜಿ., ಹೇಮಂತ ಸಿ.ಎನ್., ಜೀರಗಿ, ಮಂಜುನಾಥ ಎಸ್.ಪಿ., ಮಂಜುನಾಥ ವಡ್ಡರ, ಪಿ.ಎಸ್. ತಟ್ಟಿ ಇತರರಿದ್ದರು.ಸಿ.ವಿ. ರಾಮನ್ ಸಾಧನೆ ಅಧ್ಯಯನ ಅಗತ್ಯರಾಣಿಬೆನ್ನೂರು: ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿದ ಸಿ.ವಿ. ರಾಮನ್ ಸಾಧನೆಯ ಅಧ್ಯಯನ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದು ಮುಖ್ಯೋಪಾಧ್ಯಾಯ ಬಿ.ಪಿ. ಶಿಡೇನೂರ ಹೇಳಿದರು.ಇಲ್ಲಿನ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 17ರಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವೈಜ್ಞಾನಿಕ ಚಿಂತನೆಗಳು ಮಕ್ಕಳಲ್ಲಿ ಸಂಶೋಧನೆಯ ಪ್ರವೃತ್ತಿಯನ್ನು ಹುಟ್ಟು ಹಾಕುತ್ತವೆ ಎಂದರು.ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಪೂರ್ಣಿಮಾ ನೆಗಳೂರುಮಠ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜ್ವಾಲಾಮುಖಿ ಸ್ಫೋಟ, ಶಾಖೋತ್ಪನ್ನದ ಪರಿಣಾಮ, ವಿದ್ಯುತ್ಕೋಶದ ಮೂಲಕ ವಿದ್ಯುತ್ ಪ್ರವಾಹ ಮುಂತಾದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.
ಆರ್.ಬಿ. ಚಲವಾದಿ, ವನಜಾಕ್ಷಿ ಪಾಟೀಲ, ಪ್ರತಿಭಾ ಮೈಲಾರಕಳ್ಳಿಮಠ, ಕೆ.ಎಸ್. ಮ್ಯಾಗೇರಿ, ಶ್ವೇತಾ ಎಚ್.ವಿ. ಮತ್ತಿತರರಿದ್ದರು.