ಬಿಸಿಎಂ ವಸತಿ ನಿಲಯಗಳಿಗೆ ಸೌಲಭ್ಯ ಕಲ್ಪಿಸಲು ಕರವೇ ಆಗ್ರಹ

| Published : Jul 15 2025, 01:00 AM IST

ಬಿಸಿಎಂ ವಸತಿ ನಿಲಯಗಳಿಗೆ ಸೌಲಭ್ಯ ಕಲ್ಪಿಸಲು ಕರವೇ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಹಟ್ಟಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಹಾಗೂ ಬಿಸಿಎಂ ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಶಿರಹಟ್ಟಿ: ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಹಾಗೂ ಬಿಸಿಎಂ ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಕರವೇ ತಾಲೂಕು ಘಟಕದ ಅಧ್ಯಕ್ಷ ಶಿವು ಮಠದ ಮಾತನಾಡಿ, ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ಹೆಬ್ಬಾಳ, ಬನ್ನಿಕೊಪ್ಪ, ಭಾವನೂರ ಸೇರಿದಂತೆ ಇನ್ನೂ ಅನೇಕ ವಸತಿ ನಿಲಯಗಳಿಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲದೇ ಮಕ್ಕಳು ಪರಿತಪಿಸುತ್ತಿವೆ ಎಂದು ದೂರಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಸತಿ ನಿಲಯಗಳನ್ನು ಆರಂಭಿಸಿದ್ದು, ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನಲ್ಲಿ ಹೆಸರಿಗೆ ಮಾತ್ರ ವಸತಿ ನಿಲಯಗಳು ಎಂಬಂತಾಗಿವೆ. ಈ ವ್ಯವಸ್ಥೆ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು. ಕೆಲವು ವಸತಿ ನಿಲಯಗಳಲ್ಲಿ ಕುಡಿಯುವ ನೀರು, ಶೌಚಾಲಯಗಳ ಕೊಠಡಿ, ವಸತಿ ನಿಲಯಗಳ ಸುತ್ತ ಕಾಂಪೌಂಡ ಇಲ್ಲದೇ ರಾತ್ರಿ ಸಮಯದಲ್ಲಿ ಮಕ್ಕಳ ಭಯಪಡುತ್ತಿದ್ದಾರೆ. ಅಲ್ಲದೆ ಮಕ್ಕಳಿಗೆ ಮೇನು ಪ್ರಕಾರ ಊಟ, ಉಪಾಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದೇ ವ್ಯವಸ್ಥೆ ಮುಂದುವರೆದರೆ ಸಂಘಟನೆ ವತಿಯಿಂದ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಡೆಣ್ಣವರ, ತಾಲೂಕು ಕಾರ್ಯಾಧ್ಯಕ್ಷ ನೂರ ಅಹ್ಮದ್ ಆದರಹಳ್ಳಿ, ತಾಲೂಕು ಉಪಾಧ್ಯಕ್ಷ ಗಾಳೆಪ್ಪ ಮರಚಣನವರ, ಕರವೇ ತಾಲೂಕು ಸಂಚಾಲಕ ಮಂಜುನಾಥ ಗುಡಿಮನಿ, ಶಿರಹಟ್ಟಿ ನಗರ ಘಟಕದ ಅಧ್ಯಕ್ಷ ಮಾಬುಸಾಬ ಡಾಲಾಯತ್, ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗರಾಜ ಎನ್.ಎಚ್., ತಾಲೂಕು ಪದಾಧಿಕಾರಿಗಳಾದ ಪ್ರವೀಣ್, ಪಕ್ಕೀರೇಶ, ಇಂಗಳಗಿ, ರಾಹುಲ್, ಮಡಿವಾಳರ್, ನಾಗಯ್ಯ ಕಾಶಿಮಠ, ಮಂಜುನಾಥ್ ಓಲೆಕಾರ್, ನಿಹಾಲ್ ಸೊರಟೂರ, ವಿನಾಯಕ ಪಾಟೀಲ್, ಹನುಮಂತ ಕುರಿ, ವಿನಾಯಕ ಪತ್ತಾರ, ಬಸವರಾಜ ಸೇರಿ ಅನೇಕರು ಇದ್ದರು.