ಬಿಜೆಪಿ, ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಮತ ನೀಡಲು ಮನವಿ

| Published : May 30 2024, 12:46 AM IST

ಸಾರಾಂಶ

ಕಡೂರು, ಭೋಜೇಗೌಡರು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿದ್ದರು. ಧನಂಜಯ ಸರ್ಜಿಯವರು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸಾರ್ವಜನಿಕರ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಹಾಗಾಗಿ ಅವರಿಗೆ ಮತ ನೀಡಿ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಭೋಜೇಗೌಡರು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿದ್ದರು. ಧನಂಜಯ ಸರ್ಜಿಯವರು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸಾರ್ವಜನಿಕರ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಹಾಗಾಗಿ ಅವರಿಗೆ ಮತ ನೀಡಿ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಹೇಳಿದರು.

ತಾಲೂಕಿನ ಸಖರಾಯಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಬಿಜೆಪಿ ಹಾಗೂ ಜಾತ್ಯಾತೀತ ಜನತಾದಳದ ಮೈತ್ರಿ ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಹಾಗೂ ಎಸ್ ಎಲ್‌ ಭೋಜೇಗೌಡರ ಪರವಾಗಿ ಮತ ಯಾಚಿಸಿದರು.

ಬೋಜೇಗೌಡರು ಈ ಭಾಗದ ಶಿಕ್ಷಕರ ಕ್ಷೇತ್ರದಿಂದ ಉತ್ತಮ ಕೆಲಸ ಮಾಡಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಶಿಕ್ಷಕರಿಗೆ ಹತ್ತಿರವಾಗಿದ್ದಾರೆ. ಮತ್ತೆ ಅವರನ್ನು ಗೆಲ್ಲಿಸಿ ಇನ್ನುಳಿದ ಸಮಸ್ಯೆ ಪರಿಹರಿಸಲು ಕೈ ಜೋಡಿಸಿ ಅದರಂತೆ ಡಾ.ಸರ್ಜಿಯವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸಮಾಜ ಸೇವೆಯಲ್ಲೂ ಕೆಲಸ ಮಾಡಿ ಪದವೀಧರ ಕ್ಷೇತ್ರದ ಜ್ವಲಂತ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಲು ಜಯಗಳಿಸುವಂತೆ ಮಾಡುವುದು ನಿಮ್ಮ ಮೇಲಿದೆ ಎಂದರು. ಜಿಪಂನ ಮಾಜಿ ಉಪಾದ್ಯಕ್ಷ ಜೆ.ಎನ್. ವಿಜಯಕುಮಾರ್ ಮಾತನಾಡಿ, ಭೋಜೇಗೌಡರು ಶಿಕ್ಷಕರ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅದೇ ರೀತಿ ಡಾ.ಧನಂಜಯ ಸರ್ಜಿಯವರು ಉತ್ತಮ ಅಭ್ಯರ್ಥಿ ಯಾಗಿದ್ದು ಅವರನ್ನು ಆಯ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಕೊಟ್ಟಂತಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ತಾಪಂ ಮಾಜಿ ಸದಸ್ಯ ಆನಂದನಾಯ್ಕ, ಮುಖಂಡರಾದ ಲೋಕೇಶ್ ಮಾಸ್ಟರ್, ದಿನೇಶ್ ಪಾದಮನೆ, ಪ್ರಕಾಶ್, ಚೇತನ್, ಮಂಜುನಾಥ್ ಹಾಗೂ ಶಿಕ್ಷಕರು ಹಾಜರಿದ್ದರು. 29ಕೆಕೆಡಿಯು3.

ಕಡೂರು ತಾಲೂಕಿನ ಸಖರಾಯಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಬಿಜೆಪಿ ಹಾಗೂ ಜಾತ್ಯಾತೀತ ಜನತಾದಳದ ಮೈತ್ರಿ ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಹಾಗೂ ಎಸ್ ಎಲ್ ಭೋಜೇಗೌಡರ ಪರವಾಗಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಮತ ಯಾಚಿಸಿದರು.