ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ಹೆಚ್ಚಿದೆ: ಗೌಡಪ್ಪಗೋಳ, ಭರಮಣ್ಣವರ ಕಿಡಿ

| Published : May 28 2024, 01:00 AM IST / Updated: May 28 2024, 01:01 AM IST

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ಹೆಚ್ಚಿದೆ: ಗೌಡಪ್ಪಗೋಳ, ಭರಮಣ್ಣವರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಪೊಲೀಸ್‌ ಠಾಣೆಗೆ ಹಾಗೂ ಪೊಲೀಸ್‌ರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇನ್ನು ಜನರ ಪರಿಸ್ಥಿತಿ ಹೇಳತಿರದು ಎಂದು ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹಾಗೂ ಬಿಜೆಪಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕಾಕರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಪೊಲೀಸ್‌ ಠಾಣೆಗೆ ಹಾಗೂ ಪೊಲೀಸ್‌ರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇನ್ನು ಜನರ ಪರಿಸ್ಥಿತಿ ಹೇಳತಿರದು ಎಂದು ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹಾಗೂ ಬಿಜೆಪಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಕಿಡಿಕಾರಿದ್ದಾರೆ.ಸೋಮವಾರ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ವಿಷಯ ತಿಳಿಸಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ಹೆಚ್ಚಿದೆ. ಗಲಭೆ ಸಮಯದಲ್ಲಿ ಪೊಲೀಸ್‌ ಠಾಣೆಗೆ ನುಗ್ಗಿ ಸಿಬ್ಬಂದಿಯರಿಗೆ ಹೊಡೆದು ಸರ್ಕಾರ ಆಸ್ತಿಯನ್ನು ನಾಶ ಮಾಡಿದರೂ ಪೊಲೀಸ್‌ರು ಮೂಖ ಪ್ರೇಕ್ಷರಂತೆ ನಿಲ್ಲುತ್ತಿರುವುದು ಮತ್ತೊಂದು ತುಷ್ಟೀಕರಣದ ಮುಖವಾಗಿದೆ. ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ನಡೆದಾಗ ನಮ್ಮ ಬಿಜೆಪಿ ಸರ್ಕಾರ ಪೊಲೀಸ್‌ರ ಬೆನ್ನಿಗೆ ನಿಂತು ಗಲಭೆಕೋರರ ವಿರುದ್ಧ ಕಠಿಣ ಕ್ರಮಕೈಗೊಂಡು ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿತ್ತು. ಆದರೆ, ಇಂದಿನ ಸರ್ಕಾರ ತುಷ್ಟೀಕರಣದ ಹೆಸರಲ್ಲಿ ಗಲಭೆಕೋರರ ಪರ ನಿಂತು ಪೊಲೀಸ್‌ ಠಾಣೆಗೆ ಮತ್ತು ಪೊಲೀಸ್‌ರಿಗೆ ರಕ್ಷಣೆ ನೀಡದೇ ಇರುವುದು ಖಡನೀಯವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಪೊಲೀಸ್‌ರ ಪರ ನಿಂತು ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ಆದರೆ, ಗೃಹ ಸಚಿವರ ಅಸಮರ್ಥತೆಯಿಂದ ಪೋಲಿಸರನ್ನು ಕಾಂಗ್ರೆಸ್‌ ಕಾರ್ಯಕರ್ತರಂತೆ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಈ ಕೂಡಲೇ ಗಲಭೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಿ ಪೊಲೀಸ್‌ ಠಾಣೆಯಲ್ಲಿ ನಾಶ ಮಾಡಿರುವ ಆಸ್ತಿಯನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.27 ಜಿಕೆಕೆ-1