ಸಾರಾಂಶ
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಡೊಂಬರಪಲ್ಕೆ ಎಂಬಲ್ಲಿ ಅಪ್ಪಿಯಣ್ಣ ಯಾನೆ ಶ್ರೀನಿವಾಸ ಮೂಲ್ಯ ಕಳೆದ 50 ವರ್ಷಗಳಿಂದ ನಿರ್ಮಿಸುತ್ತಿರುವ ರಸ್ತೆ ಇರುವ ಸ್ಥಳಕ್ಕೆ ಕಾರ್ಕಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜೆ. ಆಗಮಿಸಿ ಅಪ್ಪಿಯಣ್ಣ ಅವರ ಕುಶಲೋಪರಿ ವಿಚಾರಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಡೊಂಬರಪಲ್ಕೆ ಎಂಬಲ್ಲಿ ಅಪ್ಪಿಯಣ್ಣ ಯಾನೆ ಶ್ರೀನಿವಾಸ ಮೂಲ್ಯ ಕಳೆದ 50 ವರ್ಷಗಳಿಂದ ನಿರ್ಮಿಸುತ್ತಿರುವ ರಸ್ತೆ ಇರುವ ಸ್ಥಳಕ್ಕೆ ಕಾರ್ಕಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜೆ. ಆಗಮಿಸಿ ಅಪ್ಪಿಯಣ್ಣ ಅವರ ಕುಶಲೋಪರಿ ವಿಚಾರಿಸಿದರು.ರಸ್ತೆ ನಿರ್ಮಾಣ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ರಸ್ತೆಗೆ ಶ್ರೀನಿವಾಸ ಮೂಲ್ಯ ಅಪೇಕ್ಷೆಯಂತೆ ಈ ರಸ್ತೆಗೆ ಚರಂಡಿ ಹಾಗು ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಮೋರಿ ನಿರ್ಮಾಣ ಮಾಡುವಂತೆ ಮರ್ಣೆ ಗ್ರಾಮ ಪಂಚಾಯತ್ ಪಿಡಿಒ ತಿಲಕ್ ರಾಜ್ ಅವರಿಗೆ ಸೂಚಿಸಿದರು. ಈ ಬಾರಿ ಕ್ರಿಯಾ ಯೋಜನೆಯಲ್ಲಿ ಪ್ರಸ್ತಾಪಿಸಿ ಮೋರಿ ನಿರ್ಮಾಣ ಮಾಡುವಂತೆ ಪಿಡಿಒ ಭರವಸೆ ನೀಡಿದರು.
ಡೊಂಬರಪಲ್ಕೆ ಪಲ್ಕೆ ರಸ್ತೆಗೆ ಡಾಂಬರೀಕರಣ ಮಾಡಲು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆಜೆ ತಿಳಿಸಿದರು.ಅಜೆಕಾರು ನಾಡಕಚೇರಿ ತಹಸೀಲ್ದಾರ್ ಅಪ್ಪಿಯಣ್ಣ ಮನೆಗೆ ಅಗಮಿಸಿ ಕಂದಾಯ ಇಲಾಖೆಯಿಂದ ಅಪ್ಪಿಯಣ್ಣ ಕುಟುಂಬಕ್ಕೆ ಸಿಗುವ ಯೋಜನೆಗಳ ಮಾಹಿತಿ ಪಡೆದರು. ಇದೆ ಸಂದರ್ಭ ಪಂಚಾಯಿತಿ ಅದಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಈ ರಸ್ತೆ ಸಮಸ್ಯೆ ಕುರಿತು ‘ಕನ್ನಡಪ್ರಭ’ ಜ.31ರಂದು ವಿಸ್ತೃತ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು.