ಅರಿವು ಯೋಜನೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

| Published : Jun 27 2024, 01:02 AM IST

ಸಾರಾಂಶ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಕೊಡಗು ವತಿಯಿಂದ 2024-25 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಅರಿವು ಯೋಜನೆಯಡಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಕೊಡಗು ವತಿಯಿಂದ 2024-25 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಅರಿವು ಯೋಜನೆಯಡಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ವಿದ್ಯಾಭ್ಯಾಸ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ/ಸಿಇಟಿ/ನೀಟ್ ಮುಖಾಂತರ) ಎಂಬಿಬಿಎಸ್, ಬಿಡಿಎಸ್, ಬಿ.ಇ/ಬಿಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಬಿ ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶು ವೈದ್ಯಕೀಯ ವ್ಯಾಸಂಗಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲ ನೀಡಲಾಗುತ್ತದೆ. ಸಿಇಟಿ/ನೀಟ್ ಮೂಲಕ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿ ಶೈಕ್ಷಣಿಕ ಸಾಲ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ವೆಬ್ ಸೈಟ್ https://kmdconline.karnataka.gov.in/ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‌ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿ ಪ್ರಿಂಟೌಟ್ ಪಡೆದು ಕ್ಯೂಆರ್ ಕೋಡ್ ಹೊಂದಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ. ಪಿ.ಯು.ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಫೋಟೋ 4(ಪಾಸ್ ಪೋಟ್ ಸೈಜ್), ಸಿ.ಇ.ಟಿ/ ನೀಟ್ ಹಾಲ್ ಟಿಕೆಟ್ ಪ್ರತಿಗಳು ಮತ್ತು ನೋಟರಿ ಮಾಡಿಸಿದ ರೂ.100 ರ ಛಾಪಾ ಕಾಗದದಲ್ಲಿ Indemnity Bond ಈ ಎಲ್ಲಾ ದಾಖಲಾತಿಗಳನ್ನು: ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ್ ಭವನ, ಗ್ರಾಮಾಂತರ ಪೋಲೀಸ್ ಠಾಣೆ ಹತ್ತಿರ, ಕಾಲೇಜು ರಸ್ತೆ, ಮಡಿಕೇರಿ ತಾಲೂಕು ಕಚೇರಿ, ಕೊಡಗು ಜಿಲ್ಲೆ ಈ ಕಚೇರಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿ ಪಡೆಯಲು ಈ ಕಚೇರಿಯ ದೂರಾವಾಣಿ ಸಂಖ್ಯೆ 08272-201449 ಗೆ ಸಂಪರ್ಕಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜು.7 ಕೊನೆಯ ದಿನವಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.