ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 2025-26ನೇ ಶೈಕ್ಷಣಿಕ ಸಾಲಿಗೆ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಮೂಲಕ ಆನ್ಲೈನ್ ಹಾಗೂ ನೇರವಾಗಿ ವಿಶ್ವವಿದ್ಯಾಲಯದ ಹೆಲ್ಪ್ಡೆಸ್ಕ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು.ಬಿ.ಪಿ.ಎ. ((Bachelor of Performing Arts): ಮೂರು ವರ್ಷಗಳ ಕೋರ್ಸ್ ಐಚ್ಛಿಕ ವಿಷಯಗಳು- ನಾಟಕ, ಭರತನಾಟ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ, ತಬಲಾ, ಮೃದಂಗ, ವೀಣಾ, ಪಿಟೀಲು. ಭಾಷಾ ಪತ್ರಿಕೆ- ಕನ್ನಡ/ ಐಚ್ಛಿಕ ಕನ್ನಡ/ ಸಂಸ್ಕøತ ಮತ್ತು ಇಂಗ್ಲೀಷ್. ಅರ್ಹತೆ: ಪಿ.ಯು.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಅರ್ಜಿ ವಿತರಣಾ ದಿನ ಜೂನ್ 11. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 30.ಎಂ.ಪಿ.ಎ : ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ (ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು ಮತ್ತು ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಮತ್ತು ವಿಶ್ವವಿದ್ಯಾಲಯದ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ ಹೊಂದುವುದು). ಡಿ.ಲಿಟ್ : ಸಂಗೀತ, ನೃತ್ಯ, ನಾಟಕ ಹಾಗೂ ಪ್ರದರ್ಶಕ ಕಲೆಗಳಲ್ಲಿ ಅಧ್ಯಯನ ನಡೆಸಿ ಉನ್ನತ ಮಟ್ಟದ ಪರಿಣಿತಿ ಹೊಂದಿರಬೇಕು. ಸರ್ಟಿಫಿಕೇಟ್ ಕೋರ್ಸ್(6 ತಿಂಗಳು) : ಭಕ್ತಿಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ರಂಗ ಸಂಗೀತ, ಭರತನಾಟ್ಯ, ನಾಟಕ, ಹಾರ್ಮೋನಿಯಂ, ತಬಲ, ಯೋಗ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಯಕ್ಷಗಾನ, ಗಮಕ. ಡಿಪ್ಲೋಮಾ ಕೋರ್ಸ್ (ಒಂದು ವರ್ಷ): ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ (ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು).
ಪಿ.ಜಿ. ಡಿಪ್ಲೋಮಾ 1 ವರ್ಷ: ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ (ಯಾವುದೇ ಪದವಿ ಅಥವಾ ತತ್ಸಮಾನ). ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದ ವೆಬ್ಸೈಟ್ https://www.musicuniversity.ac.in ಅಂತರ್ಜಾಲದಲ್ಲಿ ಇರುವ ಯು.ಯು.ಸಿ.ಎಂ.ಎಸ್ ಲಿಂಕ್ https://uucms.karnataka.gov.in ಮೂಲಕ ಸಲ್ಲಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ಇಮೇಲ್ musicuniversity.ac.in ಅಥವಾ musicuniversitymys@gmail.com (ಮೊಬೈಲ್ ಸಂಖ್ಯೆ 9480150826) ಸಂಪರ್ಕಿಸಬಹುದು. ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಸಾರ್ವಜನಿಕ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ಸೌಲಭ್ಯವನ್ನು ಪಡೆಯಬಹುದು......................ಜುಲೈನಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆ ಫಲಿತಾಂಶಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೇ 11 ರಂದು ರಾಜ್ಯಾದ್ಯಂತ 22 ಪರೀಕ್ಷಾ ಕೇಂದ್ರಗಳಲ್ಲಿ ಶಾಸ್ತ್ರಪತ್ರಿಕೆ ಪರೀಕ್ಷೆ ನಡೆಸಿದೆ. ಪ್ರಾಯೋಗಿಕ ಪರೀಕ್ಷೆಗಳು ಮೇ 13 ರಿಂದ ಪ್ರಾರಂಭವಾಗಿದ್ದು ಜೂನ್ 8 ರಂದು ಮುಕ್ತಾಯವಾಗಲಿದೆ. ಈ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದ್ದು ಜುಲೈ ತಿಂಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಕುಲಸಚಿವ ಪ್ರೊ.ಮಂಜುನಾಥ್ ತಿಳಿಸಿದ್ದಾರೆ...............
ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ಎಲ್ಲ 22 ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮವಾಗಿ ಆಯೋಜನೆಗೊಂಡಿದೆ. ಮುಂದಿನ ವರ್ಷ ಇನ್ನಷ್ಟು ತಾಂತ್ರಿಕವಾಗಿ ಪರೀಕ್ಷೆಗಳು ನಡೆಯಲಿದೆ. ಈ ವಿವಿಯಡಿಯಲ್ಲಿ 80 ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಈ ಸಂಗೀತ ವಿವಿ ರಾಷ್ಟ್ರದ ಪ್ರತಿಷ್ಠೆಯ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ.-ನಾಗೇಶ್ ಬೆಟ್ಟಕೋಟೆ, ಕುಲಪತಿ